ಚಿನ್ನ ಪಾಲಿಶ್ ಮಾಡುವುದಾಗಿ ವಂಚಿಸಿದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ಬಲೆಗೆ - Karavali Times ಚಿನ್ನ ಪಾಲಿಶ್ ಮಾಡುವುದಾಗಿ ವಂಚಿಸಿದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ಬಲೆಗೆ - Karavali Times

728x90

1 March 2026

ಚಿನ್ನ ಪಾಲಿಶ್ ಮಾಡುವುದಾಗಿ ವಂಚಿಸಿದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ಬಲೆಗೆ

ವೇಣೂರು, ಮಾರ್ಚ್ 01, 2026 (ಕರಾವಳಿ ಟೈಮ್ಸ್) : ಸೇಲ್ಸ್ ಮ್ಯಾನ್ ರೂಪದಲ್ಲಿ ಮನೆಗೆ ಬಂದು ಚಿನ್ನ ಪಾಲಿಶ್ ಮಾಡುವುದಾಗಿ ನಂಬಿಸಿ ವಂಚಿಸಿದ ಪ್ರಕರಣ ಬೇಧಿಸಿದ ವೇಣೂರು ಪೊಲೀಸರು ಬಿಹಾರ ಮೂಲದ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. 

ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಸುಫೋಲ್ ಜಿಲ್ಲೆಯ ನಿವಾಸಿ ಚಂದನ್ ಕುಮಾರ್ (30) ಎಂದು ಹೆಸರಿಸಲಾಗಿದೆ. 

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ತಂಗಡಿ ತಾಲೂಕು ಕಾಶಿಪಟ್ಣ ಗ್ರಾಮದ ಪಣಿಲಾಜೆ ಎಂಬಲ್ಲಿ, ಫೆಬ್ರವರಿ 10 ರಂದು ಆರೋಪಿ ಸೇಲ್ಸ್ ಮ್ಯಾನ್ ರೂಪದಲ್ಲಿ, ಚಿನ್ನದ ಒಡವೆಗಳನ್ನು ತೊಳೆದು ಪಾಲಿಶ್ ಮಾಡಿಕೊಡುವುದಾಗಿ ನಂಬಿಸಿ, ಚಿನ್ನವನ್ನು ಪಡೆದುಕೊಂಡು ಅದನ್ನು ಯಾವುದೋ ದ್ರಾವಣ ಬಳಸಿ ಕರಗಿಸಿ ವಂಚಿಸಿದ್ದ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ತಕರಣದ ತನಿಖೆ ನಡೆಸಿದ ವೇಣೂರು ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಯಿಂದ ಸುಮಾರು 75 ಸಾವಿರ ರೂಪಾಯಿ ಮೌಲ್ಯದ 7 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

ವೇಣೂರು ಪೊಲೀಸ್ ಠಾಣಾ ಪಿಎಸ್ಸೈಗಳಾದ ಅಕ್ಷಯ್ ಡವಗಿ, ಶ್ರೀಮತಿ ಓಮನ ಎನ್ ಅವರ ನೇತೃತ್ವದಲ್ಲಿ ಎಎಸೈಗಳಾದ ವೆಂಕಟೇಶ್ ನಾಯ್ಕ, ಬೆನ್ನಿಚ್ಚನ್, ಸಿಬ್ಬಂದಿಗಳಾದ ಕೃಷ್ಣ, ಶ್ರೀಮತಿ ಕೇಶವತಿ, ಬಸವರಾಜ್, ಮೋಹನ್, ರಾಕೇಶ್ ಅವರ ತಂಡ ಈ ಬಂಧನ ಕಾರ್ಯಾಚರಣೆ ನಡೆಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಚಿನ್ನ ಪಾಲಿಶ್ ಮಾಡುವುದಾಗಿ ವಂಚಿಸಿದ ಬಿಹಾರ ಮೂಲದ ಆರೋಪಿ ವೇಣೂರು ಪೊಲೀಸರ ಬಲೆಗೆ Rating: 5 Reviewed By: karavali Times
Scroll to Top