ಧರ್ಮಗ್ರಂಥಗಳ ಸಾರ ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಸೌಹಾರ್ದತೆ ಶಾಶ್ವತ ಆಗಲಿದೆ : ಫಾದರ್ ವಿಕ್ಟರ್ ಡಿಸೋಜ - Karavali Times ಧರ್ಮಗ್ರಂಥಗಳ ಸಾರ ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಸೌಹಾರ್ದತೆ ಶಾಶ್ವತ ಆಗಲಿದೆ : ಫಾದರ್ ವಿಕ್ಟರ್ ಡಿಸೋಜ - Karavali Times

728x90

15 March 2026

ಧರ್ಮಗ್ರಂಥಗಳ ಸಾರ ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಸೌಹಾರ್ದತೆ ಶಾಶ್ವತ ಆಗಲಿದೆ : ಫಾದರ್ ವಿಕ್ಟರ್ ಡಿಸೋಜ

ರಮಾನಾಥ ರೈ ಮುಂದಾಳುತ್ವದಲ್ಲಿ ಪಾಣೆಮಂಗಳೂರಿನಲ್ಲಿ ಸೌಹಾರ್ದ ಇಫ್ತಾರ್ ಕೂಟ 


ಬಂಟ್ವಾಳ, ಮಾರ್ಚ್ 15, ಮಾರ್ಚ್, 2026 (ಕರಾವಳಿ ಟೈಮ್ಸ್) : ಎಲ್ಲಾ ಧರ್ಮಗಳ ಪವಿತ್ರ ಧರ್ಮಗ್ರಂಥಗಳು ಶಾಂತಿ-ಸೌಹಾರ್ದತೆಯನ್ನೇ ಸಾರುತ್ತಿದ್ದು, ಎಲ್ಲಾ ಧರ್ಮದ ಅನುಯಾಯಿಗಳು ತಮ್ಮ ಜೀವನದಲ್ಲಿ ಧರ್ಮಗ್ರಂಥಗಳ ಸಾರವನ್ನು ಅನುಸರಿಸಿದರೆ, ಅದಕ್ಕೆ ಬದ್ದರಾಗಿ ಜೀವಿಸಿದರೆ ಸಮಾಜದಲ್ಲಿ ಸೌಹಾರ್ದತೆ ಶಾಶ್ವತವಾಗಿ ನೆಲೆ ನಿಲ್ಲಲು ಸಾಧ್ಯವಿದೆ ಎಂದು ಮೊಡಂಕಾಪು ಇನ್ಫಂಟ್ ಜೀಸಸ್ ಚರ್ಚಿನ ಧರ್ಮಗುರು ರೆ ಫಾ ವಿಕ್ಟರ್ ಡಿಸೋಜ ಅಭಿಪ್ರಾಯಪಟ್ಟರು. 

ಮಾಜಿ ಸಚಿವ ಬಿ ರಮಾನಾಥ ರೈ ಅವರ ನೇತೃತ್ವದಲ್ಲಿ ಮಾರ್ಚ್ 14 ರಂದು ಸಂಜೆ ಪಾಣೆಮಂಗಳೂರಿನ ಸಾಗರ್ ಅಡಿಟೋರಿಯಂನಲ್ಲಿ ಆಯೋಜಿಸಲಾಗಿದ್ದ ಸೌಹಾರ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರಿ. 

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ರಮಾನಾಥ ರೈ ಮಾತನಾಡಿ, ಸಮಾಜದಲ್ಲಿ ಮನುಷ್ಯ ಮನಸ್ಸುಗಳು ಪರಸ್ಪರ ಅರಿತುಕೊಂಡು ಶಾಂತಿ-ಸೌಹಾರ್ದತೆಯಿಂದ ಬಾಳಿ ಬದುಕಬೇಕು ಎಂಬ ಮಹತ್ತರ ಉದ್ದೇಶ ಇಟ್ಟುಕೊಂಡು ಎಲ್ಲ ಧರ್ಮೀಯರ ಆಚರಣೆಗಳಾದ ಗಣೇಶೋತ್ಸವ, ಇಫ್ತಾರ್, ಕ್ರಿಸ್ಮಸ್ ಮೊದಲಾದ ಹಬ್ಬಗಳನ್ನು ಸಾರ್ವಜನಿಕವಾಗಿ ಸೌಹಾರ್ದಯುತವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದಕ್ಕೆ ಜನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು. 

ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ನೆಹರುನಗರ ಮಸೀದಿ ಖತೀಬ್ ದಾವೂದ್ ಇಸ್ಮಾಯಿಲ್ ಫೈಝಿ, ಶಾಂತಿ ಪ್ರಕಾಶನದ ಅಧ್ಯಕ್ಷ ಮುಹಮ್ಮದ್ ಕುಂಞÂ ಸೌಹಾರ್ದ ಸಂದೇಶ ನೀಡಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಎಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ ಯು ಟಿ ಇಫ್ತಿಕಾರ್ ಅಲಿ, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಸದಸ್ಯರುಗಳಾದ ಪಿಯೂಸ್ ಎಲ್ ರಾಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪ್ರಮುಖರಾದ ಪದ್ಮನಾಭ ರೈ ಕಲ್ಲಡ್ಕ, ಬಿ ಎಂ ಅಬ್ಬಾಸ್ ಅಲಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಇಬ್ರಾಹಿಂ ನವಾಝ್, ಬೇಬಿ ಕುಂದರ್, ಅಶ್ವನಿಕುಮಾರ್ ರೈ, ಮುಹಮ್ಮದ್ ಅಲಿ ಪುತ್ತೂರು, ಎ ಬಿ ಅಬ್ದುಲ್ಲ ಕೊಳ್ನಾಡು, ಹಾಜಿ ಪಿ ಎಸ್ ಅಬ್ದುಲ್ ಹಮೀದ್, ಯೂಸುಫ್ ಕರಂದಾಡಿ, ಶೈಲಜಾ ರಾಜೇಶ್, ಮೊದಲಾದವರು ಭಾಗವಹಿಸಿದ್ದರು. ಪತ್ರಕರ್ತ ಲತೀಫ್ ನೇರಳಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಧರ್ಮಗ್ರಂಥಗಳ ಸಾರ ಅರ್ಥೈಸಿಕೊಂಡು ಜೀವಿಸಿದಾಗ ಸಮಾಜದಲ್ಲಿ ಸೌಹಾರ್ದತೆ ಶಾಶ್ವತ ಆಗಲಿದೆ : ಫಾದರ್ ವಿಕ್ಟರ್ ಡಿಸೋಜ Rating: 5 Reviewed By: karavali Times
Scroll to Top