ಸುಳ್ಯ, ಮಾರ್ಚ್ 15, ಮಾರ್ಚ್, 2026 (ಕರಾವಳಿ ಟೈಮ್ಸ್) : ಸುಳ್ಯ ಪೇಟೆಯಲ್ಲಿ ಮಾರ್ಚ್ 12 ರಂದು ಹಲವು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದ ಸುಳ್ಯ ನಿವಾಸಿ ರಕ್ಷಿತ್ ಜಿ ಎಂಬಾತನಿಗೆ ನ್ಯಾಯಾಲಯ ದಂಡದ ಜೊತೆಗೆ ಸಮುದಾಯ ಸೇವೆಯ ವಿಶಿಷ್ಟ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹಲವು ಬಾರಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ ರಕ್ಷಿತ್ ಎಂಬಾತನ ವಿರುದ್ದ ಐಎಂವಿ ಆಕ್ಟ್ ಅಡಿಯಲ್ಲಿ ಕಲಂ 119 ಆರ್/ಡಬ್ಲ್ಯು 177, 184, 194 (ಸಿ) ಪ್ರಕಾರ ಮೂರು ಪ್ರತ್ಯೇಕ ಲಘು ಪ್ರಕರಣ ದಾಖಲಿಸಿದ್ದ ಸುಳ್ಯ ಪೊಲೀಸ್ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ ಅವರು ಸುಳ್ಯ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಈ ಬಗ್ಗೆ ಸಿಸಿ 42/26, 43/26, 44/26 ರಂತೆ ವಿಚಾರಣೆ ನಡೆಸಿದ ನ್ಯಾಯಾಧೀಶರು ಆರೋಪಿಗೆ ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಟ್ಟು ಮೂರು ಸಾವಿರ ರೂಪಾಯಿ ದಂಡ ಹಾಗೂ ಮೂರು ಪ್ರಕರಣಗಳಲ್ಲಿ ತಲಾ ಐದು ದಿನಗಳಂತೆ ಮಾರ್ಚ್ 15 ರಿಂದ 29ರವರೆಗೆ ಒಟ್ಟು 15 ದಿನಗಳ ಕಾಲ ಸಂಚಾರ ನಿಯಮಗಳನ್ನು ಒಳಗೊಂಡ ಫಲಕಗಳನ್ನು ಹಿಡಿದು ಸುಳ್ಯ ಪೇಟೆಯ ಜಂಕ್ಷನ್ ಗಳಲ್ಲಿ ನಿಂತು ಸಾರ್ವಜನಿಕರಿಗೆ ಸಂಚಾರ ನಿಯಮ ಪಾಲನೆಯ ಅರಿವನ್ನು ಮೂಡಿಸುವಂತೆ ಸಮುದಾಯ ಸೇವೆ ನಿರ್ವಹಿಸುವಂತೆ ಹಾಗೂ ಆರೋಪಿಯ ಚಾಲನ ಪರವಣಿಗೆಯನ್ನು ಮೂರು ತಿಂಗಳ ಕಾಲ ಅಮಾನತಿನಲ್ಲಿಡಲು ಆದೇಶಿಸಿದ್ದಾರೆ.















0 comments:
Post a Comment