ಬಂಟ್ವಾಳ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ಹಳದಿ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಳ ಗ್ರಾಮದ ಪಾಂಡೆಲ ಎಂಬಲ್ಲಿ ಮಾ 22 ರಂದು ಸಂಭವಿಸಿದೆ.
ಮೃತ ಮಹಿಳೆಯನ್ನು ಗುಲಾಬಿ ಅಲಿಯಾಸ್ ಗಾಯತ್ರಿ (43) ಎಂದು ಹೆಸರಿಸಲಾಗಿದೆ. ಪತಿ ಕಾರ್ಯಾಡಿ ಎಂಬಲ್ಲಿನ ತೋಟಕ್ಕೆ ಹೋಗಿ ದನಗಳಿಗೆ ಹುಲ್ಲು ತರುವಷ್ಟರಲ್ಲಿ ಗಾಯತ್ರಿ ಅವರು ಮನೆಯ ಹಿಂಬದಿಯ ಶೀಟ್ ಹಾಕಿದ ಕೋಣೆಯ ಮಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಕಳೆದ ಕೆಲ ಸಮಯಗಳಿಂದ ಹಳದಿ ರೋಗದಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಮಾನಸಿಕವಾಗಿ ನೊಂದುಕೊಂಡು ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಅರ್ ಪ್ರಕರಣ ದಾಖಲಾಗಿದೆ.












0 comments:
Post a Comment