ಬಂಟ್ವಾಳ, ಮಾರ್ಚ್ 23, 2026 (ಕರಾವಳಿ ಟೈಮ್ಸ್) : ನದಿಗೆ ಈಜಾಡಲು ಇಳಿದಿದ್ದ ವ್ಯಕ್ತಿ ಮುಳುಗಿ ಮೃತಪಟ್ಟ ಘಟನೆ ಕರಂಬಾರು ಗ್ರಾಮದ ಕೇಲ್ಕರ ದೇವಸ್ಥಾನದ ಬಳಿ ಮಾ 21 ರಂದು ಸಂಭವಿಸಿದೆ.
ಮೃತ ಯುವಕನನ್ನು ಬೆಳ್ತಂಗಡಿ ತಾಲೂಕು, ಕುವೆಟ್ಟು ಗ್ರಾಮದ ಕೋಂಟುಪಲ್ಕೆ ನಿವಾಸು ಇರ್ಫಾನ್ (19) ಎಂದು ಹೆಸರಿಸಲಾಗಿದೆ. ಇವರು ತನ್ನ ಜೊತೆ ಕೆಲಸ ಮಾಡುತ್ತಿದ್ದ ಫಯಾಝ್ ಹಾಗೂ ರಶೀದ್ ಎಂಬವರೊಂದಿಗೆ ಬೆಳ್ತಂಗಡಿ ತಾಲೂಕು ಕರಂಬಾರು ಗ್ರಾಮದ ಕೇಲ್ಕರ ದೇವಸ್ಥಾನದ ಬಳಿ ಹರಿಯುವ ನದಿ ನೀರಿಗೆ ಇಳಿದು ಈಜಾಡುತ್ತಿರುವ ಸಂದರ್ಭ ಆಳ ನೀರಿನಲ್ಲಿ ಆಕಸ್ಮಿಕವಾಗಿ ಮುಳುಗಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಮೇಲಕ್ಕೆತ್ತಿ ಉಜಿರೆ ಬೆನಕ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆಗೆ ಸ್ಪಂದಿಸದ ಇರ್ಫಾನ್ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮೃತರ ಸಂಬಂಧಿ ಇಬ್ರಾಹಿಂ ಅವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.












0 comments:
Post a Comment