ಸುಳ್ಯ : ಬಾರಿನಲ್ಲಿ ಚೂರಿ ಇರಿತದಿಂದ ಇಬ್ಬರಿಗೆ ಗಾಯ, ಆರೋಪಿಗಳಿಬ್ಬರ ದಸ್ತಗಿರಿ - Karavali Times ಸುಳ್ಯ : ಬಾರಿನಲ್ಲಿ ಚೂರಿ ಇರಿತದಿಂದ ಇಬ್ಬರಿಗೆ ಗಾಯ, ಆರೋಪಿಗಳಿಬ್ಬರ ದಸ್ತಗಿರಿ - Karavali Times

728x90

15 March 2026

ಸುಳ್ಯ : ಬಾರಿನಲ್ಲಿ ಚೂರಿ ಇರಿತದಿಂದ ಇಬ್ಬರಿಗೆ ಗಾಯ, ಆರೋಪಿಗಳಿಬ್ಬರ ದಸ್ತಗಿರಿ

ಸುಳ್ಯ, ಮಾರ್ಚ್ 15, ಮಾರ್ಚ್, 2026 (ಕರಾವಳಿ ಟೈಮ್ಸ್) : ಸುಳ್ಯದ ಶ್ರೀರಾಮ್ ಪೇಟೆಯಲ್ಲಿರುವ ರಾಜೇಶ್ ಬಾರ್ ನಲ್ಲಿ ಮಾ 14 ರಂದು ಸಂಜೆ ನಿತೇಶ್ ಆರ್.ಕೆ (33) ಮತ್ತು ಅವರ ಸ್ನೇಹಿತ ಹರೀಶ್ ಮೇಲೆ ಇಬ್ಬರು ಯುವಕರು ಶುಲ್ಲಕ ಕಾರಣಕ್ಕೆ ಚೂರಿಯಿಂದ ಹಲ್ಲೆ ಮಾಡಿದ್ದು, ಹರೀಶನ ಎಡ ಕುತ್ತಿಗೆ ಹಾಗೂ ಇಬ್ಬರ ಎಡ ಕೈಗಳಿಗೆ ಗಾಯಗಳಾಗಿವೆ. ಬಾರ್‍ನಲ್ಲಿದ್ದ ಇತರರು ಹಲ್ಲೆ ತಡೆದು ಗಾಯಾಳುಗಳನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಆರೋಪಿಗಳಾದ ಅಜ್ಜಾವರ ಗ್ರಾಮದ ರಾಜೇಶ್ ಬಿ.ಆರ್ (27) ಮತ್ತು ದಯಾನಂದ್ (30) ಎಂಬವರನ್ನು ದಸ್ತಗಿರಿ ಮಾಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸುಳ್ಯ : ಬಾರಿನಲ್ಲಿ ಚೂರಿ ಇರಿತದಿಂದ ಇಬ್ಬರಿಗೆ ಗಾಯ, ಆರೋಪಿಗಳಿಬ್ಬರ ದಸ್ತಗಿರಿ Rating: 5 Reviewed By: karavali Times
Scroll to Top