ಸುಳ್ಯ, ಮಾರ್ಚ್ 26, ಮಾರ್ಚ್, 2026 (ಕರಾವಳಿ ಟೈಮ್ಸ್) : ಬೊಲೆರೋ ಪಿಕಪ್ ವಾಹನದಲ್ಲಿ ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಸುಳ್ಯ ಪೊಲೀಸರು ಜಾನುವಾರು ಸಹಿತ ಮೂವರನ್ನು ಬಂಧಿಸಿದ ಘಟನೆ ಅಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲಾ ಬಳಿ ಗುರುವಾರ ಬೆಳಗ್ಗಿನ ಜಾವ ನಡೆದಿದೆ.
ಬಂಧಿತ ಆರೋಪಿಗಳನ್ನು ಕೇರಳ ರಾಜ್ಯದ ಕಣ್ಣೂರು ನಿವಾಸಿ, ಪಿಕಪ್ ಚಾಲಕ ಇಸಾಕ್ ಕೆ ಕೆ (40), ಅಮರ ಪಡನೂರು ಗ್ರಾಮದ ನಿವಾಸಿ ಸಂತೋಷ್ ಎಂ ಎಸ್ (48) ಹಾಗೂ ಸುಳ್ಯ ನಿವಾಸಿ ಇಬ್ರಾಹಿಂ ಎ ಎಂ (32) ಎಂದು ಹೆಸರಿಸಲಾಗಿದೆ.
ಮಾರ್ಚ್ 26 ರಂದು ಬೆಳಗ್ಗಿನ ಜಾವ ಸುಳ್ಯ ಪೊಲೀಸ್ ಠಾಣಾ ಪಿಎಸ್ಸೈ ಸಂತೋಷ್ ಬಿ ಪಿ ನೇತೃತ್ವದ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿ ಸುಳ್ಯ ಆಲೆಟ್ಟಿ ಕ್ರಾಸ್ ಬಳಿ ತೆರಳುತ್ತಿದ್ದಾಗ ಕೆ ಎಲ್ 59 ಡಿ 2979 ನೋಂದಣಿ ಸಂಖ್ಯೆಯ ಬೊಲೆರೊ ಪಿಕಪ್ ವಾಹನ ಅನುಮಾನಾಸ್ಪದವಾಗಿ ಕಂಡುಬಂದಿದ್ದು, ಸದ್ರಿ ವಾಹನವನ್ನು ಆಲೆಟ್ಟಿ ಗ್ರಾಮದ ಮಿತ್ತಡ್ಕ ರೋಟರಿ ಶಾಲಾ ಬಳಿ ತಡೆದು ನಿಲ್ಲಿಸಿದ್ದಾರೆ. ಈ ವೇಳೆ ವಾಹನದಲ್ಲಿದ್ದ ಓರ್ವ ಪರಾರಿಯಾಗಿರುತ್ತಾನೆ. ಸದ್ರಿ ವಾಹನದ ಚಾಲಕನನ್ನು ವಿಚಾರಿಸಿದಾಗ ಕೇರಳ ಕಣ್ಣೂರು ನಿವಾಸಿ ಇಸಾಕ್ ಕೆ ಕೆ (40) ಎಂಬುದಾಗಿ ತಿಳಿಸಿದ್ದು, ಸದ್ರಿ ವಾಹನವನ್ನು ಪರಿಶೀಲಿಸಿದಾಗ ಮೂರು ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಿಸುತ್ತಿರುವುದು ಕಂಡು ಬಂದಿದೆ. ಜಾನುವಾರುಗಳ ಬಗ್ಗೆ ವಿಚಾರಿಸಿದಾಗ ಅಮರ ಪಡನೂರು ಗ್ರಾಮದ ಸಂತೋûಷ್ ಎಂ ಎಸ್ ಎಂಬವರ ದನಗಳನ್ನು ಸುಳ್ಯ ನಿವಾಸಿ ಇಬ್ರಾಹಿಂ ಎ.ಎಂ ಎಂಬವರ ಮೂಲಕ ಖರೀದಿಸಿ, ಜಾನುವಾರು ಸಾಗಾಟಕ್ಕೆ ಯಾವುದೇ ಪರವಾನಿಗೆ ಪಡೆಯದೆ ವಧೆ ಮಾಡುವ ಸಲುವಾಗಿ ಸಾಗಿಸುತ್ತಿರುವುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ರಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.











0 comments:
Post a Comment