ಮಂಗಳೂರು, ಮಾರ್ಚ್ 12, ಮಾರ್ಚ್, 2026 (ಕರಾವಳಿ ಟೈಮ್ಸ್) : ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಪರಿಸರದ ಗ್ಯಾರೇಜ್ ವೊಂದರಿಂದ ವಾಹನಗಳ ಬಿಡಿಭಾಗಗಳನ್ನು ಕಳವುಗೈದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ದಸ್ತಗಿರಿ ಮಾಡಿದ ಪೊಲೀಸರು ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಬಂಧಿತ ಆರೋಪಿಯನ್ನು ಮೂಲತಃ ರಾಜಸ್ಥಾನ ರಾಜ್ಯದ ಜೋಧ್ ಪುರ ಖುದೇಚ ಕಬಾಸ್ ಮೇಘವಾಲೋ ನಿವಾಸಿ, ಪ್ರಸ್ತತ ಬೆಂಗಳೂರು ಬನಶಂಕರಿ-ಶ್ರೀನಿವಾಸ ನಗರದಲ್ಲಿ ವಾಸವಾಗಿರುವ ಚೊಟ್ಟುದಾಸ್ ಎಂಬವರ ಪುತ್ರ ಲಾರಿ ಚಾಲಕ ಮುಖೇಶ್ ದಾಸ್ (46) ಎಂದು ಹೆಸರಿಸಲಾಗಿದೆ. ಫೆಬ್ರವರಿ 14-15 ರ ಮಧ್ಯದ ರಾತ್ರಿ ಸಮಯ ಲಾರಿವೊಂದರಲ್ಲಿ ಬಂದ ಚಾಲಕನೊಬ್ಬನು ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿಯ ಬಳಿಯಲ್ಲಿರುವ ಫ್ರೆಂಡ್ಸ್ ಗ್ಯಾರೇಜ್ ಬಳಿ ಲಾರಿಯನ್ನು ಪಾರ್ಕ್ ಮಾಡಿ ಗ್ಯಾರೇಜಿನಲ್ಲಿ ದುರಸ್ತಿಗಾಗಿ ನಿಲ್ಲಿಸಿದ್ದ ಎರಡು ಘನ ವಾಹನದ ಬಿಡಿಭಾಗಗಳನ್ನು ಕಳವು ಮಾಡಿಕೊಂಡು ಲಾರಿಯಲ್ಲಿ ಕಳವು ಮಾಡಿದ್ದು ಈ ಬಗ್ಗೆ ಗ್ಯಾರೇಜ್ ಮಾಲೀಕರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ಕಳವು ಪ್ರಕರಣದಲ್ಲಿ ತನಿಖೆಯನ್ನು ಕೈಗೊಂಡ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಲಾರಿ ಚಾಲಕ ಆರೋಪಿ ಮುಖೇಶ್ ದಾಸ್ ಎಂಬಾತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಕಳವುಗೈದ 96 ಸಾವಿರ ರೂಪಾಯಿ ಮೌಲ್ಯದ ವಾಹನದ ಬಿಡಿ ಭಾಗಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಈಚರ್ ಲಾರಿ ಸೇರಿದಂತೆ 15.96 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.












0 comments:
Post a Comment