ಬಂಟ್ವಾಳ, ಮಾರ್ಚ್ 10, 2026 (ಕರಾವಳಿ ಟೈಮ್ಸ್) : ಮಹಿಳೆಯೋರ್ವರ ಮೃತದೇಹವು ಮನೆ ಸಮೀಪದ ತೋಟದ ಕೆರೆಯಲ್ಲಿ ಪತ್ತೆಯಾದ ಘಟನೆ ಕಾವಳಮೂಡೂರು ಗ್ರಾಮದ ಮೂಡಾಲು ಎಂಬಲ್ಲಿ ಸಂಭವಿಸಿದೆ.
ಮೃತ ಮಹಿಳೆಯನ್ನು ಕಾವಳಮೂಡೂರು ಗ್ರಾಮದ ಕೊಳಕೆಗದ್ದೆ ನಿವಾಸಿ ಶ್ರೀಮತಿ ಸುನಂದ (62) ಎಂದು ಹೆಸರಿಸಲಾಗಿದೆ. ಈ ಬಗ್ಗೆ ಅವರ ಪುತ್ರ ಪ್ರೇಮಚಂದ್ರ (49) ಅವರು ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಿದ್ದು, ಇವರು ಕುಟುಂಬ ಮನೆಯಾದ ಕಾವಳಮೂಡೂರು ಗ್ರಾಮದ ಮುಡಾಲುಗುತ್ತು ಎಂಬಲ್ಲಿಗೆ ಹೋದವರು ನಂತರ ವಾಪಾಸು ಮನೆಗೆ ಬಾರದೇ ಇದ್ದಾಗ ಮನೆ ಬಳಿ ಹುಡುಕಾಡಿದಾಗ ಮನೆಗೆ ಬರುವ ದಾರಿಯಾದ ಕಾವಳಮೂಡೂರು ಗ್ರಾಮದ ಮೂಡಾಲು ಎಂಬಲ್ಲಿಯ ಶೀನ ಪೂಜಾರಿಯವರ ತೋಟದ ಕೆರೆಯಲ್ಲಿ ಮೃತ ದೇಹ ಪತ್ತೆಯಾಗಿದೆ.
ಇವರಿಗೆ ತೋಟದಲ್ಲಿ ತಿರುಗಾಡುವ ಅಭ್ಯಾಸ ಇದ್ದು, ತಲೆ ಸುತ್ತು ಸಮಸ್ಯೆಯೂ ಇದೆ. ಆಗಾಗ ತೋಟದಲ್ಲಿ ತಲೆ ಸುತ್ತಿ ಬೀಳುತ್ತಿದ್ದರು. ತೋಟದಲ್ಲಿ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ತೋಟದಲ್ಲಿ ಕೆರೆಯ ನೀರಿಗೆ ಕಾಲು ಜಾರಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ ಎಂದು ನೀಡಿರುವ ದೂರಿನಂತೆ ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.












0 comments:
Post a Comment