ಮಂಗಳೂರು, ಮಾರ್ಚ್ 13, ಮಾರ್ಚ್, 2026 (ಕರಾವಳಿ ಟೈಮ್ಸ್) : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿಶ್ವ ವಿದ್ಯಾನಿಲಯ ಕಾಲೇಜು ಮಂಗಳೂರು ಹಾಗೂ ವುಮೆನ್ಸ್ ವಿಂಗ್ ಐ.ಕ್ಯೂ.ಎ.ಸಿ. ಇನ್ ಅಸೋಸಿಯೆಶನ್ ಮಂಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನ ಸಭಾಂಗಣದಲ್ಲಿ ಮಾ 13 ರಂದು ನಡೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ಲಿಂಗಾನುಪಾತದ ಅಸಮಾನತೆಯ ಬಗ್ಗೆ, ಹೆಣ್ಣಿನ ಮಹತ್ವದ ಕುರಿತು ಹಾಗೂ ಲಿಂಗ ಸಮಾನತೆಯನ್ನು ಕಾಪಾಡುವಲ್ಲಿ ಯುವ ಪೀಳಿಗೆಗಳು ಹೆಚ್ಚಿನ ಪ್ರಾಮುಖ್ಯತೆ ವಹಿಸಬೇಕು. ಎಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಎಲ್ಲಾ 14 ವರ್ಷದ ಹೆಣ್ಣು ಮಕ್ಕಳು ಪಡೆಯುವಂತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಯಾವುದೇ ಊಹಾಪೆÇೀಹಗಳಿಗೆ ಕಿವಿಕೊಡದೆ, ಚುಚ್ಚು ಮದ್ದಿನ ಬಗ್ಗೆ ಸಂಶಯಗಳಿದ್ದಲ್ಲಿ ಹತ್ತಿರ ಸರ್ಕಾರಿ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದರು.
ವಿಶ್ವವಿದ್ಯಾನಿಲಯ ಕಾಲೇಜು ಪ್ರಾಂಶುಪಾಲ ಪೆÇ್ರ. ಗಣಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸ¯ಹಾ ಸಮಿತಿ (ಪಿ.ಸಿ. ಹಾಗೂ ಪಿ.ಎನ್.ಡಿ.ಟಿ.) ಅಧ್ಯಕ್ಷೆ ಡಾ. ಅಮೃತಾ ಭಂಡಾರಿ, ಇನ್ನರ್ ವೀಲ್ ಕ್ಲಬ್ ಆಫ್ ಮಂಗಳೂರು ನಾರ್ತ್ ಇದರ ಅಧ್ಯಕ್ಷ ಡಾ. ಅರುಣಾ ಜಾಲನ್, ಕೆ.ಎಂ.ಸಿ. ಮಕ್ಕಳ ವಿಭಾಗದ ಡಾ. ನೂತನ್ ಕಾಮತ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಡಾ. ಭಾರತಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಶ್ವವಿದ್ಯಾನಿಲಯದ ಅಧೀನದಲ್ಲಿ ಬರುವ ಅಂತರ್ ಕಾಲೇಜು ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆ-1994, ಲಿಂಗ ತಾರತಮ್ಯ ತಡೆಯುವ ಕುರಿತು ಹಾಗೂ ಲಿಂಗಾನುಪಾತವನ್ನು ಹೆಚ್ಚಿಸುವ ಕುರಿತು ಭಿತ್ತಿಪತ್ರ ಹಾಗೂ ಕನ್ನಡ ಘೋಷ ವಾಕ್ಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಕಾರ್ಯಕ್ರಮದಲ್ಲಿ ಪ್ರಮಾಣ ಪತ್ರ ಹಾಗೂ ಬಹುಮಾನಗಳನ್ನು ವಿತರಿಸಲಾಯಿತು.













0 comments:
Post a Comment