ಬಂಟ್ವಾಳ್ಯ, ಮಾರ್ಚ್ 18, ಮಾರ್ಚ್, 2026 (ಕರಾವಳಿ ಟೈಮ್ಸ್) : ರೈತರಿಗೆ ವರದಾನವಾಗಿರುವ ಸಜಿಪ ಮುನ್ನೂರು ಹಾಗೂ ಸಜಿಪಮೂಡ ಎರಡು ಏತ ನೀರಾವರಿ ಯೋಜನೆಗಳು 90 ಎಚ್ ಪಿ ಪಂಪ್ ಸೆಟ್ ಗಳ ಮೂಲಕ ರೈತರಿಗೆ ನೇತ್ರಾವತಿ ನದಿಯಿಂದ ನೀರಾವರಿ ಸೌಲಭ್ಯ ಒದಗಿಸುತ್ತಿದ್ದು ಇದೀಗ ಅಚ್ಚುಕಟ್ಟುದಾರರ ಹೆಚ್ಚುವರಿ ಜಮೀನುಗಳಿಗೆ 200 ಎಂಎಂ ಪೈಪ್ ಲೈನ್ ಮೂಲಕ ಕೃಷಿ ಚಟುವಟಿಕೆಗಳಿಗೆ ನೀರಾವರಿ ಸೌಲಭ್ಯ ವಿಸ್ತರಣೆಗೆ ತಲಾ 23 ಲಕ್ಷ ಅನುದಾನ ದೊರೆಯಲಿದೆ.
ಇತ್ತೀಚೆಗೆ ಫಲಾನುಭವಿಗಳು ಈ ಬಗ್ಗೆ ಮಾಜಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಸ್ಥಳೀಯ ಕುಂದು ಕೊರತೆಗಳ ಕುರಿತಾಗಿ ಸಭೆ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು.
ಸ್ಥಳೀಯ ಕೃಷಿಕರು ಕೋರ್ಟ್ ಮೆಟ್ಟಿಲೇರಿದ್ದ ಪರಿಣಾಮ ಆಮೆನಡಿಗೆಯಲ್ಲಿ ಸಾಗುತ್ತಿದ ಸಜಿಪನಡು ಏತ ನೀರಾವರಿ ಯೋಜನೆಯು 2016 ರಲ್ಲಿ ಪೂರ್ಣಗೊಂಡಿದ್ದು, ಅಂದಿನ ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಉದ್ಘಾಟನೆಗೊಳಿಸಿದ್ದರು.













0 comments:
Post a Comment