ಪುತ್ತೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : ಜಮೀನು ತಕರಾರಿಗೆ ಸಂಬಂಧಿಸಿ ಅಣ್ಣನೇ ತಂಗಿಗೆ ಕತ್ತಿಯಿಂದ ಹಲ್ಲೆ ನಡೆಸಿದ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಮಹಿಳೆಯನ್ನು ಪುತ್ತೂರು ನಿವಾಸಿ ಮಮ್ತಾಜ್ (32) ಎಂದು ಹೆಸರಿಸಲಾಗಿದ್ದು, ಆರೋಪಿ ಸಹೋದರನನ್ನು ಕಲಂದರ್ ಶಾಫಿ ಎಂದು ಹೆಸರಿಸಲಾಗಿದೆ. ಮಮ್ತಾಜ್ ಅವರ ತಂದೆ ಮತ್ತು ಅಣ್ಣನಿಗೆ ಜಮೀನಿನ ವಿಚಾರದಲ್ಲಿ ತಕರಾರಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ. ಮಾರ್ಚ್ 15 ರಂದು ಬೆಳಿಗ್ಗೆ, ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಉರುವದಲ್ಲಿರುವ ಮನೆಯಲ್ಲಿ ಮಮ್ತಾಜ್ ಅವರು ಕೆಲಸ ಮಾಡುತ್ತಿದ್ದಾಗ, ಅಣ್ಣ ಕಲಂದರ್ ಶಾಫಿ ಕತ್ತಿಯೊಂದಿಗೆ ಬಂದು ಅವ್ಯಾಚ್ಯವಾಗಿ ಬೈದು, ಜೀವ ಬೆದರಿಕೆ ಹಾಕಿ, ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ. ಹಲ್ಲೆಯಿಂದ ಮಮ್ತಾಜ್ ಅವರ ಕೈಗೆ ಗಾಯವಾಗಿರುತ್ತದೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












0 comments:
Post a Comment