ಫಾಚ್ರ್ಯೂನರ್ ಕಾರಿನಲ್ಲಿ ಹಿಂಸಾತ್ಮಕ ಜಾನುವಾರು ಸಾಗಾಟ ಬೇಧಿಸಿದ ಬಜ್ಪೆ ಪೊಲೀಸರು : ಆರೋಪಿಗಳು ಪರಾರಿ - Karavali Times ಫಾಚ್ರ್ಯೂನರ್ ಕಾರಿನಲ್ಲಿ ಹಿಂಸಾತ್ಮಕ ಜಾನುವಾರು ಸಾಗಾಟ ಬೇಧಿಸಿದ ಬಜ್ಪೆ ಪೊಲೀಸರು : ಆರೋಪಿಗಳು ಪರಾರಿ - Karavali Times

728x90

18 March 2026

ಫಾಚ್ರ್ಯೂನರ್ ಕಾರಿನಲ್ಲಿ ಹಿಂಸಾತ್ಮಕ ಜಾನುವಾರು ಸಾಗಾಟ ಬೇಧಿಸಿದ ಬಜ್ಪೆ ಪೊಲೀಸರು : ಆರೋಪಿಗಳು ಪರಾರಿ

ಮಂಗಳೂರು, ಮಾರ್ಚ್ 19, ಮಾರ್ಚ್, 2026 (ಕರಾವಳಿ ಟೈಮ್ಸ್) : ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಪೆ ಗ್ರಾಮದ ಬಡಗೆಡಪದವು ಗ್ರಾಮದ ಸಾಸ್ತಾವು ಎಂಬಲ್ಲಿ 4 ಜಾನುವಾರುಗಳನ್ನು ಡಿಎಲ್10 ಸಿಇ 6227 ನೋಂದಣಿ ಸಂಖ್ಯೆಯ ಫಾಚ್ರ್ಯೂನರ್ ಕಾರಿನಲ್ಲಿ ತುಂಬಿಕೊಂಡು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದನ್ನು ಪತ್ತೆ ಮಾಡಿ ಒಟ್ಟು 8.42 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಮಾರ್ಚ್ 18 ರಂದು ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಾರಿನಲ್ಲಿ ಕಟ್ಟಿ ಹಾಕಿ ಮಾಂಸ ಮಾಡಲು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎ.ಸಿ.ಪಿ ಶ್ರೀಕಾಂತ್, ಇನ್ಸ್ ಪೆಕ್ಟರ್ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಮತ್ತು ಸಿಬ್ಬಂದಿಗಳಾದ ರಾಜೇಶ್, ಚಿದಾನಂದ ಹಾಗೂ ಪ್ರಕಾಶ್ ಅವರು ದಾಳಿ ಮಾಡಿ 4 ದನಗಳಿದ್ದ ಫಾಚ್ರ್ಯೂನರ್ ಕಾರು, ತಲವಾರು, ಕಬ್ಬಿಣದ ರಾಡ್ ವಶಪಡಿಸಿಕೊಂಡಿದ್ದಾರೆ. 

ದಾಳಿ ವೇಳೆ ಆರೋಪಿಗಳು ಮಾಲುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. 8.42 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಸಂಬಂಧ ಆರೋಪಿಗಳ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಫಾಚ್ರ್ಯೂನರ್ ಕಾರಿನಲ್ಲಿ ಹಿಂಸಾತ್ಮಕ ಜಾನುವಾರು ಸಾಗಾಟ ಬೇಧಿಸಿದ ಬಜ್ಪೆ ಪೊಲೀಸರು : ಆರೋಪಿಗಳು ಪರಾರಿ Rating: 5 Reviewed By: karavali Times
Scroll to Top