ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ : ಮಾರ್ಚ್ ತಿಂಗಳೊಂದರಲ್ಲೇ ಸಿಇಐಆರ್ ಪೋರ್ಟಲ್ ಮೂಲಕ 150 ಮೊಬೈಲ್ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರ - Karavali Times ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ : ಮಾರ್ಚ್ ತಿಂಗಳೊಂದರಲ್ಲೇ ಸಿಇಐಆರ್ ಪೋರ್ಟಲ್ ಮೂಲಕ 150 ಮೊಬೈಲ್ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರ - Karavali Times

728x90

7 April 2026

ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ : ಮಾರ್ಚ್ ತಿಂಗಳೊಂದರಲ್ಲೇ ಸಿಇಐಆರ್ ಪೋರ್ಟಲ್ ಮೂಲಕ 150 ಮೊಬೈಲ್ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರ

ಮಂಗಳೂರು, ಎಪ್ರಿಲ್ 07, 2026 (ಕರಾವಳಿ ಟೈಮ್ಸ್) : ಸಿಇಐಆರ್ ಪೋರ್ಟಲ್ ಮೂಲಕ ಮೊಬೈಲ್ ಪೋನ್ ವಶಪಡಿಸಿಕೊಳ್ಳುವ ವಿಶೇಷ ಕಾರ್ಯಾಚರಣೆ ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾರ್ಚ್ ತಿಂಗಳೊಂದರಲ್ಲೇ ಕಳೆದು ಹೋದ 150 ಮೊಬೈಲ್ ಫೋನುಗಳನ್ನು ವಶಪಡಿಸಿಕೊಂಡು ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. 

ಸಿಇಐಆರ್ ರ್ಪೋರ್ಟಲ್ ಮೂಲಕ ಸಾರ್ವಜನಿಕರು ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸಲ್ಲಿಸಿದ ದೂರಿಗೆ ಸಂಬಂಧಿಸಿದಂತೆ ಮಾರ್ಚ್ ತಿಂಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಅನ್ಯ ಜಿಲ್ಲೆ, ರಾಜ್ಯಗಳಲ್ಲೂ ವಶಪಡಿಸಿಕೊಂಡಿದ್ದು, ಅವುಗಳನ್ನು ಆಯಾ ಠಾಣಾ ವ್ಯಾಪ್ತಿಯಲ್ಲಿ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ. 

ಈ ಕಾರ್ಯಾಚರಣೆ ಮುಂದಿನ ದಿನಗಳಲ್ಲೂ ಮುಂದುವರಿಯಲಿದ್ದು, ಸಾರ್ವಜನಿಕರು ಈ ನೂತನ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾ ಎಸ್ಪಿ ಡಾ ಅರುಣ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಪೊಲೀಸರ ವಿಶೇಷ ಕಾರ್ಯಾಚರಣೆ : ಮಾರ್ಚ್ ತಿಂಗಳೊಂದರಲ್ಲೇ ಸಿಇಐಆರ್ ಪೋರ್ಟಲ್ ಮೂಲಕ 150 ಮೊಬೈಲ್ ಪತ್ತೆ ಹಚ್ಚಿ ವಾರೀಸುದಾರರಿಗೆ ಹಸ್ತಾಂತರ Rating: 5 Reviewed By: karavali Times
Scroll to Top