ಆರಿಫ್ ಮರ್ಡರ್ ಹಿನ್ನಲೆ ಬೇಧಿಸಿದ ಮಂಗಳೂರು ಪೊಲೀಸರು : ಕೃತ್ಯದಲ್ಲಿ ನೇರ ಭಾಗಿಯಾದ 6 ಮಂದಿ ಸಹಿತ ಒಟ್ಟು 7 ಮಂದಿ ಪೊಲೀಸರ ವಶದಲ್ಲಿ - Karavali Times ಆರಿಫ್ ಮರ್ಡರ್ ಹಿನ್ನಲೆ ಬೇಧಿಸಿದ ಮಂಗಳೂರು ಪೊಲೀಸರು : ಕೃತ್ಯದಲ್ಲಿ ನೇರ ಭಾಗಿಯಾದ 6 ಮಂದಿ ಸಹಿತ ಒಟ್ಟು 7 ಮಂದಿ ಪೊಲೀಸರ ವಶದಲ್ಲಿ - Karavali Times

728x90

8 April 2026

ಆರಿಫ್ ಮರ್ಡರ್ ಹಿನ್ನಲೆ ಬೇಧಿಸಿದ ಮಂಗಳೂರು ಪೊಲೀಸರು : ಕೃತ್ಯದಲ್ಲಿ ನೇರ ಭಾಗಿಯಾದ 6 ಮಂದಿ ಸಹಿತ ಒಟ್ಟು 7 ಮಂದಿ ಪೊಲೀಸರ ವಶದಲ್ಲಿ

ಮಂಗಳೂರು, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ತೊಕ್ಕೊಟ್ಟು ಫ್ಲೈ ಓವರಿನಲ್ಲಿ ಮಾರ್ಚ್ 27 ರಂದು ನಡೆದ ಅರಿಫ್ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿರುವ 6 ಮಂದಿ ಸಹಿತ ಒಟ್ಟು 7 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. 

ಪೊಲೀಸರ ವಶದಲ್ಲಿರುವ ಆರೋಪಿಗಳನ್ನು ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಹಾಗೂ ಇರ್ಶಾದ್ ಎಂದು ಹೆಸರಿಸಲಾಗಿದೆ. 

ಮಾರ್ಚ್ 27 ರಂದು ಶುಕ್ರವಾರ ಮುಂಜಾನೆ ಆರೋಪಿಗಳಾದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್, ರಿಝ್ವಾನ್ ಅವರು ಆರಿಫ್ ಅವರ ಬೈಕನ್ನು ಇನ್ನೋವಾ ಕಾರಿನಲ್ಲಿ ಹಿಂಬಾಲಿಸಿ ಹಿಂದಿನಿಂದ ಡಿಕ್ಕಿ ಹೊಡೆದು ಬಳಿಕ ಮಾರಣಾಂತಿಕವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾರೆ. 

ಆರು ಮಂದಿ ಆರೋಪಿಗಳು ಕೃತ್ಯದಲ್ಲಿ ನೇರವಾಗಿ ಭಾಗಿಯಾದರೆ, ಇರ್ಶಾದ್ ಎಂಬಾತ ಆರೋಪಿಗಳಿಗೆ ವಸತಿ ಒದಗಿಸಿ ಸಹಕಾರ ನೀಡಿದ್ದಾನೆ ಎನ್ನಲಾಗಿದೆ. ಆರೋಪಿಗಳಿಗೆ ಸುಹೈಲ್ ಎಂಬಾತ ಬಾಡಿಗೆ ಕಾರನ್ನು ವ್ಯವಸ್ಥೆ ಮಾಡಿ, ಅದನ್ನು ರಿಫತ್ ಎಂಬಾತನಿಗೆ ಒಪ್ಪಿಸಿ ತಕ್ಷಣವೇ ಸೌದಿ ಅರೇಬಿಯಾದತ್ತ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 

ಮತ್ತೋರ್ವ ಆರೋಪಿ ಅರ್ಶದ್ ಎಂಬಾತ ಆರೋಪಿಗಳಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದಲ್ಲದೆ ತಂಡದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಪೆÇಲೀಸರ ಚಲನವಲನಗಳನ್ನು ಗಮನಿಸಿ ಆರೋಪಿಗಳಿಗೆ ಕ್ಷಣ ಕ್ಷಣದ ಮಾಹಿತಿ ಒದಗಿಸಿದ್ದ. ಹಾಗೂ ಆರೋಪಿಗಳು ತಲೆ ಮರೆಸಿಕೊಂಡಿದ್ದ ವೇಳೆ ಈತನೇ ಅವರಿಗೆ ಹಣಕಾಸು ಹಾಗೂ ಪ್ರಯಾಣದ ವ್ಯವಸ್ಥೆಯನ್ನೂ ಮಾಡಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. 

ಈ ಹಿಂದಿನ ಪ್ರಕರಣದ ಆರೋಪಿಯಾಗಿದ್ದ ಅಶ್ವೀರ್ ಎಂಬಾತ ಪೆÇಲೀಸರ ತನಿಖೆಯ ದಿಕ್ಕನ್ನು ತಪ್ಪಿಸಲು  ವಿದೇಶದಲ್ಲಿ ಕುಳಿತು ಆರೋಪಿಗಳಿಗೆ ತಾಂತ್ರಿಕ ನೆರವು ಒದಗಿಸಿದ್ದಾನೆ. ಈತ ದುಬೈ ಒಟಿಪಿ ಒದಗಿಸಿ, ಆರೋಪಿಗಳು ಭಾರತದಲ್ಲಿದ್ದರೂ ಅಂತಾರಾಷ್ಟ್ರೀಯ ವಾಟ್ಸಾಪ್ ಖಾತೆಗಳನ್ನು ಬಳಸುವಂತೆ ವ್ಯವಸ್ಥೆ ಮಾಡಿದ್ದಾನೆ. ಮುಸ್ತಫಾ ಮತ್ತು ಅಶ್ವೀರ್ ಎಂಬವರು ಆರೋಪಿಗಳಿಗೆ ವಿದೇಶದಿಂದ ಪ್ರಯಾಣ, ವಸತಿ ಮತ್ತು ಇತರ ವ್ಯವಸ್ಥೆಗಳಿಗೆ ಹಣಕಾಸು ನೆರವು ಒದಗಿಸಿರುವ ಬಗ್ಗೆ ಪೊಲೀರು ಸಾಕ್ಷ್ಯ ಸಂಗ್ರಹಿಸಿದ್ದಾರೆ. 

ಕೃತ್ಯದಲ್ಲಿ ನೇರವಾಗಿ ಭಾಗಿಯಾದ ಆರು ಮಂದಿ ಹಾಗೂ ಅವರಿಗೆ ಸಹಾಯ ಮಾಡಿರುವ ಇರ್ಷಾದ್ ಸದ್ಯ ಪೆÇಲೀಸರ ವಶದಲ್ಲಿದ್ದು, ಅವರನ್ನು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ಆರೋಪಿಗಳ ತನಿಖೆಯಿಂದ ಕೃತ್ಯದ ಹಿಂದಿರುವ ಇನ್ನಿತರ ವಿಷಯಗಳು ಬಯಲಿಗೆ ಬರಲಿದೆ. ಕೃತ್ಯದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆಯಿಂದ ಈ ಬಗ್ಗೆ ಎಲ್ಲವನ್ನು ಕಂಡುಕೊಂಡು ಎಲ್ಲರನ್ನು ಬಂಧಿಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೃತ್ಯಕ್ಕೆ ಹಳೆ ದ್ವೇಷ ಹಾಗೂ ನೌಫಲ್ ಎಂಬಾತನ ಸಾವಿನ ಆರಿಫ್ ಸಂಭ್ರಮಿಸಿದ್ದಾನೆ ಎನ್ನಲಾಗಿದ್ದು ಇದುವೇ ಕಾರಣ ಎಂದು ಪೊಲೀಸರು ತನಿಖೆಯಿಂದ ಕಂಡುಕೊಂಡಿದ್ದಾರೆ. 

ಆರೋಪಿಗಳಿಗೆ ಸಹಾಯವಾಗುವ ಕೆಲವು ಪ್ರಮುಖ ಅಂಶಗಳನ್ನು ಸದ್ಯ ಪೊಲೀಸರು ಮಾಧ್ಯಮಗಳಿಗೆ ಬಹಿರಂಗಪಡಿಸಿಲ್ಲ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಇಂಚಿಂಚಾಗಿ ಮಾಹಿತಿ ನೀಡಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಆರಿಫ್ ಮರ್ಡರ್ ಹಿನ್ನಲೆ ಬೇಧಿಸಿದ ಮಂಗಳೂರು ಪೊಲೀಸರು : ಕೃತ್ಯದಲ್ಲಿ ನೇರ ಭಾಗಿಯಾದ 6 ಮಂದಿ ಸಹಿತ ಒಟ್ಟು 7 ಮಂದಿ ಪೊಲೀಸರ ವಶದಲ್ಲಿ Rating: 5 Reviewed By: karavali Times
Scroll to Top