ಮಂಗಳೂರು, ಎಪ್ರಿಲ್ 08, 2026 (ಕರಾವಳಿ ಟೈಮ್ಸ್) : ನ್ಯಾಯಾಲಯಕ್ಕೆ ಹಾಜರಾಗದೆ 18 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಎಲ್ ಪಿ ಸಿ ವಾರಂಟ್ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬುಧವಾರ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಯನ್ನು ಬಜಾಲ್-ಫೈಸಲ್ ನಗರ ನಿವಾಸಿ ಅಹಮ್ಮದ್ ಎಂಬವರ ಪುತ್ರ ಅಬೂಬಕ್ಕರ್ ಸಿದ್ದೀಕ್ (41) ಎಂದು ಹೆಸರಿಸಲಾಗಿದೆ. ಈತನ ವಿರುದ್ದ ಮಂಗಳೂರು ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 272/2006 ಕಲಂ 143, 147, 323, 341, 148, ಜೊತೆಗೆ 149 ಐಪಿಸಿ ಮತ್ತು ಕಲಂ 2(ಎ)(ಬಿ) ಕೆಪಿಡಿಎಲ್‍ಪಿ ಕಾಯ್ದೆ ಪ್ರಕರಣ ದಾಖಲಾಗಿತ್ತು. ಈತ ಸುಮಾರು 18 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದು, ಈತನ ಮೇಲೆ ಮಾನ್ಯ ನ್ಯಾಯಾಲಯವು 2019 ರಲ್ಲಿ ಎಲ್ ಪಿ ಸಿ ವಾರೆಂಟ್ ಹೊರಡಿಸಿತ್ತು. ಎಪ್ರಿಲ್ 8 ರಂದು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಗವಿರಾಜ್ ಆರ್ ಪಿ ಅವರ ನಿರ್ದೆಶನದಂತೆ ಪಿಎಸ್ಸೈ ಅರುಣ್ ಕುಮಾರ್ ಡಿ ಹಾಗೂ ಸಿಬ್ಬಂದಿಗಳಾದ ಮೆಲ್ವಿನ್ ಪಿಂಟೊ, ಹನುಮರೆಡ್ಡಿ, ಸಿಕಂದರ, ರಮೇಶ, ಬಿರೇಂದ್ರ, ಸದ್ದಾಂ ಅವರ ತಂಡ ಮಂಗಳೂರು ನಗರದ ಪಿವಿಎಸ್ ಎಂಬಲ್ಲಿ ದಸ್ತಗಿರಿ ಮಾಡಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


















0 comments:
Post a Comment