ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವೀಕ್ಷಕ, ಬಂಟ್ವಾಳದ ಹಿರಿಯ ನೋಟರಿ-ನ್ಯಾಯವಾದಿ ಎಂ ಅಶ್ವನಿ ಕುಮಾರ್ ರೈ ಅವರು ದಾವಣಗೆರೆಯಲ್ಲಿ ಭರ್ಜರಿ ಮತ ಬೇಟಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಕ್ಷೇತ್ರ ವ್ಯಾಪ್ತಿಯ ಮನೆ-ಮನೆಗೆ, ಗಲ್ಲಿ-ಗಲ್ಲಿಗಳಲ್ಲಿ ಮಿಂಚಿತ ಸಂಚಾರ ನಡೆಸಿದ ಅಶ್ವನಿ ಕುಮಾರ್ ರೈ ಅವರು ಮತದಾರರೊಂದಿಗೆ ಮನವಿ ಮಾಡಿದರು. ಕಾಂಗ್ರೆಸ್ ಪಕ್ಷದ ಹಾಗೂ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಸಹಿತ ಅಭಿವೃದ್ದಿ ಕಾರ್ಯಗಳು ಮುಂದುವರಿಸುವ ನಿಟ್ಟಿನಲ್ಲಿ ಹಾಗೂ ಜನ ಇದರ ಪ್ರಯೋಜನ ಪಡೆದುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಸರಕಾರದ ನೈತಿಕ ಸ್ಥೈರ್ಯ ಹೆಚ್ಚಿಸುವಂತೆ ಅವರು ವಿನಂತಿಸಿದರು.
2 April 2026
- Blogger Comments
- Facebook Comments
Subscribe to:
Post Comments (Atom)
















0 comments:
Post a Comment