ಕೊಕ್ಕಡ : ಹಣಕಾಸಿನ ವಿಚಾರದಲ್ಲಿ ತಗಾದೆ ತೆಗೆದು ವ್ಯಕ್ತಿಗೆ ತಂಡದಿಂದ ಹಲ್ಲೆ - Karavali Times ಕೊಕ್ಕಡ : ಹಣಕಾಸಿನ ವಿಚಾರದಲ್ಲಿ ತಗಾದೆ ತೆಗೆದು ವ್ಯಕ್ತಿಗೆ ತಂಡದಿಂದ ಹಲ್ಲೆ - Karavali Times

728x90

2 April 2026

ಕೊಕ್ಕಡ : ಹಣಕಾಸಿನ ವಿಚಾರದಲ್ಲಿ ತಗಾದೆ ತೆಗೆದು ವ್ಯಕ್ತಿಗೆ ತಂಡದಿಂದ ಹಲ್ಲೆ

ಬೆಳ್ತಂಗಡಿ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಬಾರಿನಲ್ಲಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಗೆ ಅಲ್ಲಿಗೆ ಬಂದ ತಂಡವೊಂದು ಹಣಕಾಸಿನ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಘಟನೆ ಕೊಕ್ಕಡದಲ್ಲಿ ಮಾ 29 ರಂದು ನಡೆದಿರುವುದು ವರದಿಯಾಗಿದೆ. 

ಇಲ್ಲಿನ ನಿವಾಸಿ ಅಕ್ಷಯ್ (31) ಎಂಬವರು ಮಾ 29 ರಂದು ರಾತ್ರಿ ಕೊಕ್ಕಡ ಎಂಬಲ್ಲಿನ ಬಾರ್ ಎಂಡ್ ರೆಸ್ಟೋರೆಂಟಿನಲ್ಲಿ ಮದ್ಯ ಸೇವಿಸಲು ಕುಳಿತಿರುವಾಗ, ಅಲ್ಲಿಗೆ ಬಂದ ಆರೋಪಿ ಯತೀಶ್ ಎಂಬಾತ ಹಣಕಾಸಿನ ವಿಚಾರದಲ್ಲಿ ತಕರಾರು ತೆಗೆದು, ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುತ್ತಾನೆ. ಆರೋಪಿಯೊಂದಿಗೆ ಇತರೆ ಆಪಾದಿತರುಗಳಾದ ಯತೀಶ, ಧನುಷ್ ಭಂಡಾರಿ, ಶರತ್ ಭಂಡಾರಿ ಮತ್ತು ಪ್ರವೀಣ್ ಅವರುಗಳು ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ಬೈದು ಜೀವಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಈ ಬಗ್ಗೆ ಧರ್ಮಸ್ಥಳ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಕ್ಕಡ : ಹಣಕಾಸಿನ ವಿಚಾರದಲ್ಲಿ ತಗಾದೆ ತೆಗೆದು ವ್ಯಕ್ತಿಗೆ ತಂಡದಿಂದ ಹಲ್ಲೆ Rating: 5 Reviewed By: karavali Times
Scroll to Top