ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಸಮ್ಮೇಳನ - Karavali Times ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಸಮ್ಮೇಳನ - Karavali Times

728x90

6 April 2026

ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಸಮ್ಮೇಳನ

ಬಂಟ್ವಾಳ, ಎಪ್ರಿಲ್ 06, 2026 (ಕರಾವಳಿ ಟೈಮ್ಸ್) : ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು   ಸಮ್ಮೇಳನವು ಹಿರಿಯ ಮುಖಂಡ ಆನಂದ ಶೆಟ್ಟಿಗಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮ್ಮೇಳನದ ಆರಂಭದಲ್ಲಿ ಹುತಾತ್ಮ ಸಂಗಾತಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪಕ್ಷದ ತಾಲೂಕು ಕಾರ್ಯದರ್ಶಿ ತುಳಸೀದಾಸ್ ಆರ್ ಕಳೆದ ಮೂರು ವರ್ಷಗಳ ಚಟುವಟಿಗಳ ವರದಿ ಮಂಡಿಸಿದರು. ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪಕ್ಷದ ಜಿಲ್ಲಾ  ಕಾರ್ಯದರ್ಶಿ ರಾಮಣ್ಣ  ವಿಟ್ಲ ಮಾತನಾಡಿ ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಪಕ್ಷವು ದೇಶದಾದ್ಯಂತ ಜನರ ದಿನನಿತ್ಯದ ಪ್ರಶ್ನೆಗಳನ್ನು ಮುಂದಿಟ್ಟು ಹೋರಾಟ ನಡೆಸುತ್ತಿದ್ದು ಈ ಹೋರಾಟವನ್ನು ಬಲಿಷ್ಠಗೊಳಿಸಲು ಪಕ್ಷವನ್ನು ತಾಲೂಕಿನಲ್ಲಿ ಬಲಿಷ್ಠಗೊಳಿಸಬೇಕೆಂದು ಕರೆ ನೀಡಿದರು.

ಹಿರಿಯ ಕಾರ್ಮಿಕ ಮುಖಂಡ ವಿಲ್ಲಿ ವಿಲ್ಸನ್ ಭಾಗವಹಿಸಿದ್ದರು. ತಾಲೂಕು ಸಮಿತಿ ಸದಸ್ಯರಾದ ಮಹಮ್ಮದ್ ಇಕ್ಬಾಲ್ ಹಳೆಮನೆ ಹಾಗೂ ರಾಜಾ ಚೆಂಡ್ತಿಮಾರ್ ವರದಿಯ ಮೇಲಿನ ಚರ್ಚೆಯಲ್ಲಿ  ಮಾತನಾಡಿದರು. ಸಮ್ಮೇಳನದಲ್ಲಿ ತಾಲೂಕಿನ ಎಂಟು ಗ್ರಾಮಗಳಿಂದ ಪ್ರತಿನಿಧಿಗಳು ಭಾಗವಹಿಸಿದ್ದರು.

ಇದೇ ವೇಳೆ ಪಕ್ಷದ ನೂತನ ತಾಲೂಕು ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ತುಳಸೀದಾಸ್ ಆರ್, ತಾಲೂಕು ಸಮಿತಿ ಸದಸ್ಯರುಗಳಾಗಿ ಶಿವರಾಯ ಪ್ರಭು, ಸಜೇಶ್ ವಿಟ್ಲ, ಮಹಮ್ಮದ್ ಇಕ್ಬಾಲ್ ಹಳೆಮನೆ, ಮಹಮ್ಮದ್ ಲುಕ್ಮಾನ್, ಮಹಮ್ಮದ್ ಮುಂಝಿರ್, ರಾಜಾ ಚೆಂಡ್ತಿಮಾರ್, ಆನಂದ ಶೆಟ್ಟಿಗಾರ್, ಸುಲೈಮಾನ್ ಕೆಲಿಂಜ, ಸುರೇಂದ್ರ ಮರ್ತಾಜೆ, ಉಮ್ಮರ್ ಬೋಳಂತೂರು, ಶೇಖರ ಶೇರಾ, ನಾರಾಯಣ ನಾಯ್ಕ ಅಂಗ್ರಿ, ಸರಸ್ವತಿ ಮಾಣಿ, ಕುಂಞ ನಾಯ್ಕ ಅಂಗ್ರಿ, ಕುಂಞಪ್ಪ ಮೂಲ್ಯ, ವಸಂತ ಕುಲಾಲ್, ಡೆನ್ನಿಸ್ ಡಿಸೋಜ ಬೊಳ್ಳಾಯಿ, ವಿಶ್ವನಾಥ ಪೂಜಾರಿ ಇರಾ, ವಸಂತ ಗಟ್ಟಿ ಮಾರ್ನಬೈಲ್ ಅವರನ್ನು ಆಯ್ಕೆ ಮಾಡಲಾಯಿತು. 

ಪಕ್ಷದ ಜಿಲ್ಲಾ ಸಮ್ಮೇಳನವು ಎಪ್ರಿಲ್ 26ರಂದು ಮಂಗಳೂರಿನಲ್ಲಿ ನಡೆಯಲಿದ್ದು, ತಾಲೂಕಿನಿಂದ 25 ಮಂದಿ ಪ್ರತಿನಿಧಿಗಳು ಆಯ್ಕೆಯಾದರು.

  • Blogger Comments
  • Facebook Comments

0 comments:

Post a Comment

Item Reviewed: ಸಿ.ಪಿ.ಐ.ಎಂ.ಎಲ್ ಲಿಬರೇಶನ್ ಬಂಟ್ವಾಳ ತಾಲೂಕು ಸಮ್ಮೇಳನ Rating: 5 Reviewed By: karavali Times
Scroll to Top