ಮೆಲ್ಕಾರ್ : ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಐವರಿಗೆ ಗಾಯ - Karavali Times ಮೆಲ್ಕಾರ್ : ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಐವರಿಗೆ ಗಾಯ - Karavali Times

728x90

13 April 2026

ಮೆಲ್ಕಾರ್ : ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಐವರಿಗೆ ಗಾಯ

ಬಂಟ್ವಾಳ, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಜಂಕ್ಷನ್ನಿನಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಐವರು ಗಾಯಗೊಂಡ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. 

ನರಿಕೊಂಬು ಗ್ರಾಮದ ನಿವಾಸಿಗಾಳದ ಮಹಮ್ಮದ್ ರಮೀಝ್ (31), ಶಾಕೀರ್ ಅಹ್ಮದ್, ಮಹಮ್ಮದ್ ರಮೀಝ್, ಮುಹಮ್ಮದ್ ಶಾಹೀರ್, ಶಾಕೀರ್ ಮುಹಮ್ಮದ್ ಎಂದು ಹೆಸರಿಸಲಾಗಿದೆ. ಇವರು ಎಪ್ರಿಲ್ 12 ರಂದು ರಾತ್ರಿ ಸುಮಾರು 10.15ರ ಸುಮಾರಿಗೆ ಮಹಮ್ಮದ್ ರಮೀಝ್ ಅವರು ಚಾಲಕರಾಗಿದ್ದ ಕ್ರೆಟಾ ಕಾರಿನಲ್ಲಿ ನೆಹರುನಗರದಿಂದ ನಾಟೆಕಲ್ಲು ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಮೆಲ್ಕಾರ್ ಜಂಕ್ಷನ್ನಿನಲ್ಲಿ ಕಲ್ಲಡ್ಕ ಕಡೆಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾರೂಕರತೆ ಹಾಗೂ ಅತೀ ವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಿಂದ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಿ ಸಿ ರೋಡಿನ ಸೋಮಯಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕಾರು ಸಂಪೂರ್ಣ ಜಖಂಗೊಂಡಿದೆ.  ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರ್ : ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಐವರಿಗೆ ಗಾಯ Rating: 5 Reviewed By: karavali Times
Scroll to Top