ಬಂಟ್ವಾಳ, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ಸ್ಕೂಟರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಗಾಯಗೊಂಡ ಘಟನೆ ಕಾವಳಪಡೂರು ಗ್ರಾಮದ ಕಾರಿಂಜ ಕ್ರಾಸ್ ಎಂಬಲ್ಲಿ ಎಪ್ರಿಲ್ 11 ರಂದು ಸಂಭವಿಸಿದೆ.
ಗಾಯಗೊಂಡವರನ್ನು ಸ್ಕೂಟರ್ ಸವಾರ ಜಗದೀಶ್ ಪೂಜಾರಿ ಹಾಗೂ ಇನ್ನೊಂದು ಸ್ಕೂಟರ್ ಸವಾರ ಮೊಹಮ್ಮದ್ ಯಾಸೀನ್ ಮತ್ತು ಸಹಸವಾರಿಣಿ ಸೈಫುನ್ನೀಸಾ ಎಂದು ಹೆಸರಿಸಲಾಗಿದೆ. ಜಗದೀಶ್ ಪೂಜಾರಿ ಅವರು ತನ್ನ ಸ್ಕೂಟರಿನಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ವೇಳೆ ಬಿ ಸಿ ರೋಡು ಕಡೆಯಿಂದ ಬೆಳ್ತಂಗಡಿ ಕಡೆಗೆ ಸಂಚರಿಸುತ್ತಿದ್ದ ಮೊಹಮ್ಮದ್ ಯಾಸೀನ್ ಅವರು ಸವಾರಿ ಮಾಡಿಕೊಂಡು ಬಂದ ಸ್ಕೂಟರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ರಸ್ತೆಗೆ ಬಿದ್ದ ಮೂವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ತಕ್ಷಣ ಸ್ಥಳೀಯರು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಜಗದೀಶ್ ಪೂಜಾರಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಜಗದೀಶ್ ಪೂಜಾರಿ ಅವರ ಸಂಬಂಧಿಕ ಸುಭಾಶ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment