ಬಂಟ್ವಾಳ, ಎಪ್ರಿಲ್ 13, 2026 (ಕರಾವಳಿ ಟೈಮ್ಸ್) : ವ್ಯಕ್ತಿಯೋರ್ವನಿಗೆ ನೆರೆಮನೆಯಾತ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಅಮ್ಟಾಡಿ ಗ್ರಾಮದ ನಿವಾಸಿ ಶ್ರೀಮತಿ ಜಯಂತಿ (67) ಅವರು ಪೊಲೀಸರಿಗೆ ದೂರು ನೀಡಿದ್ದು, ಎಪ್ರಿಲ್ 9 ರಂದು ಸಂಜೆ ಇವರ ಪುತ್ರ ದಯಾನಂದ ಅವರು ನೆರೆಯ ದಯಾನಂದ ಯಾನೆ ಧನು ಅವರ ಮನೆಯಲ್ಲಿದ್ದಾಗ ಆರೋಪಿ ನೆರೆ ಮನೆಯ ವಸಂತ ಎಂಬಾತನು ಇವರ ಮಗ ದಯಾನಂದನನ್ನುದ್ದೇಶಿಸಿ ಅವ್ಯಾಚವಾಗಿ ಬೈದು, ಕೋಲಿ ಬಾಲಿನಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕುತ್ತಿದ್ದು, ಇದನ್ನು ನೋಡಿದ ತಾಯಿ ಜಯಂತಿ ಅವರು ಬೊಬ್ಬೆ ಹೊಡೆದುಕೊಂಡು ಓಡಿ ಬಂದಾಗ ಆರೋಪಿಯು ಜಯಂತಿ ಅವರಿಗೂ ಜೀವ ಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಯಿಂದ ಗಾಯಗೊಂಡಿರುವ ದಯಾನಂದ ಅವರನ್ನು ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜಯಂತಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment