ಪುತ್ತೂರು ಜಾತ್ರಾ ಸ್ಥಳದಲ್ಲಿ ಗಲಾಟೆ ನಡೆಸಿದ ಇಬ್ಬರು ಪೊಲೀಸ್ ವಶಕ್ಕೆ - Karavali Times ಪುತ್ತೂರು ಜಾತ್ರಾ ಸ್ಥಳದಲ್ಲಿ ಗಲಾಟೆ ನಡೆಸಿದ ಇಬ್ಬರು ಪೊಲೀಸ್ ವಶಕ್ಕೆ - Karavali Times

728x90

21 April 2026

ಪುತ್ತೂರು ಜಾತ್ರಾ ಸ್ಥಳದಲ್ಲಿ ಗಲಾಟೆ ನಡೆಸಿದ ಇಬ್ಬರು ಪೊಲೀಸ್ ವಶಕ್ಕೆ

ಪುತ್ತೂರು, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಪುತ್ತೂರು ಜಾತ್ರಾ ಸ್ಥಳದಲ್ಲಿ ಗಲಾಟೆ ಮಾಡುತ್ತಿದ್ದ ಇಬ್ಬರು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ನರಿಮೊಗರು ನಿವಾಸಿ ಹರ್ಷ ಗೋಪಾಲ್ (29) ಹಾಗೂ ಕಬಕ ನಿವಾಸಿ ಹರೀಶ್ (42) ಎಂದು ಹೆಸರಿಸಲಾಗಿದೆ. ಎಪ್ರಿಲ್ 20 ರಂದು ರಾತ್ರಿ ವೇಳೆ ಪುತ್ತೂರು ಪೇಟೆಯಲ್ಲಿರುವ ದೇವಸ್ಥಾನದ ಜಾತ್ರೆ ನಡೆಯುತ್ತಿದ್ದ ಸ್ಥಳದಲ್ಲಿ ಪುತ್ತೂರು ನಗರ ಠಾಣೆಯ ಇಬ್ಬರು ಪೆÇಲೀಸ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು  ಆ ವೇಳೆ ದೇವಸ್ಥಾನದ ಕಛೇರಿಯ ಬಳಿ ಜನ ಸೇರಿದ್ದು ಅದನ್ನು ಪರಿಶೀಲಿಸಲು ತೆರಳಿರುತ್ತಾರೆ. ಅಲ್ಲಿ ಇಬ್ಬರು ಆರೋಪಿಗಳು ಗಲಾಟೆ ನಡೆಸುತ್ತಾ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡುತ್ತಿರುವುದು ಕಂಡುಬಂದಿದೆ. ಗಲಾಟೆ ನಡೆಸದಂತೆ ತಿಳುವಳಿಕೆ ನೀಡಲಾಗಿಯೂ ಅವರುಗಳು ಗಲಾಟೆ ಮುಂದುವರಿಸಿರುತ್ತಾರೆ. ಮುಂದಿನ ಕಾನೂನು ಕ್ರಮಕ್ಕಾಗಿ ಅವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಜಾತ್ರಾ ಸ್ಥಳದಲ್ಲಿ ಗಲಾಟೆ ನಡೆಸಿದ ಇಬ್ಬರು ಪೊಲೀಸ್ ವಶಕ್ಕೆ Rating: 5 Reviewed By: karavali Times
Scroll to Top