ಮಂಗಳೂರು, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಮಹಾನಿರೀಕ್ಷಕ ಡಾ. ಎಂ.ಎ. ಸಲೀಂ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಕಛೇರಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು. ಬಳಿಕ ಪೊಲೀಸ್ ವಸತಿ ಗೃಹಗಳಿಗೆ ಭೇಟಿ ನೀಡಿ ಸಿಬ್ಬಂದಿಗಳ ಹಾಗೂ ಕುಟುಂಬ ಸದಸ್ಯರ ಅಹವಾಲುಗಳನ್ನು ಸ್ವೀಕರಿಸಿ, ಬಂಟ್ವಾಳಕ್ಕೆ ತೆರಳಿ ಡಿ.ಎ.ಆರ್ ಕಛೇರಿಗಾಗಿ ಕಾಯ್ದಿರಿಸಲಾದ ಸ್ಥಳವನ್ನು ಪರಿಶೀಲಿಸಿದರು. ಬಳಿಕ ಪೊಲೀಸ್ ಇಲಾಖೆಯ ಇನ್ನಿತರ ಕಛೇರಿಗಳಿಗೆ ಭೇಟಿ ನೀಡಿದರು.
21 April 2026
- Blogger Comments
- Facebook Comments
Subscribe to:
Post Comments (Atom)

















0 comments:
Post a Comment