ಮೂರ್ಜೆ : ಚಲಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾದ ಅಟೋ ರಿಕ್ಷಾ - Karavali Times ಮೂರ್ಜೆ : ಚಲಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾದ ಅಟೋ ರಿಕ್ಷಾ - Karavali Times

728x90

11 April 2026

ಮೂರ್ಜೆ : ಚಲಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾದ ಅಟೋ ರಿಕ್ಷಾ

ಬಂಟ್ವಾಳ, ಎಪ್ರಿಲ್ 11, 2026 (ಕರಾವಳಿ ಟೈಮ್ಸ್) : ಪೂಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿ ಸಿ ರೋಡು-ಧರ್ಮಸ್ಥಳ ರಾಷ್ಟ್ರೀಯ ಹೆದ್ದಾರಿಯ ಮೂರ್ಜೆ-ವಿಶಾಲನಗರದಲ್ಲಿ ಚಲಿಸುತ್ತಿದ್ದಾಗಲೇ ಅಟೋ ರಿಕ್ಷಾವೊಂದು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. 

ಬಾಂಬಿಲ ನಿವಾಸಿ ರೇವಣ್ಣ ಅವರ ಅನಿಲ ಸಂಪರ್ಕ ಹೊಂದಿದ ರಿಕ್ಷಾ ಹಠಾತ್ ಆಗಿ ಸಂಚಾರ ವೇಳೆ ಬೆಂಕಿಗೆ ಆಹುತಿಯಾಗಿದೆ. ಅನಿಲ  ಖಾಲಿಯಾಗಿದೆ ಎಂದು ಪೆಟ್ರೋಲ್ ತುಂಬಿಸಲು ಹೋಗುತ್ತಿದ್ದ ವೇಳೆ ರಿಕ್ಷಾದಲ್ಲಿ ಬೆಂಕಿ ಕಾಣಿಸಿಕೊಂಡು ಬಳಿಕ ಹೊತ್ತಿ ಉರಿದಿದೆ. ಅನಿಲ ಸೋರಿಕೆ ರೀತಿಯಲ್ಲಿ ವಾಸನೆ ಬಂದ ಕಾರಣ ಚಾಲಕ ರಿಕ್ಷಾ ನಿಲ್ಲಿಸುತ್ತಿದ್ದಂತೆ ರಿಕ್ಷಾಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಅವಘಡದ ಸಂದರ್ಭ ರಿಕ್ಷಾದಲ್ಲಿ ಪ್ರಯಾಣಿಕರು ಯಾರೂ ಇಲ್ಲದೆ ಇದ್ದು ಸಂಭಾವ್ಯ ಅಪಾಯ ತಪ್ಪಿದೆ. ಚಾಲಕ ರೇವಣ್ಣ ಕೂಡಾ ಅಪಾಯದ ಮುನ್ಸೂಚನೆ ಅರಿತು ರಿಕ್ಷಾದಿಂದ ಇಳಿದು ಬಚಾವಾಗಿದ್ದಾರೆ. ಬಳಿಕ ಅಟೋ ರಿಕ್ಷಾ ಸಂಪೂರ್ಣ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮೂರ್ಜೆ : ಚಲಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ಬೆಂಕಿಗಾಹುತಿಯಾದ ಅಟೋ ರಿಕ್ಷಾ Rating: 5 Reviewed By: karavali Times
Scroll to Top