ಬಂಟ್ವಾಳ, ಎಪ್ರಿಲ್ 11, 2026 (ಕರಾವಳಿ ಟೈಮ್ಸ್) : ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ತಕ್ಷಣ ಏನಾದರೊಂದು ವಿಶೇಷತೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಈ ಬಾರಿಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಬಂಟ್ವಾಳದಲ್ಲೊಂದಿಗೆ ವಿಶಿಷ್ಟ ಪ್ರಕರಣ ವರದಿಯಾಗಿದೆ.
ಮಗಳು ಕಾಲೇಜಿಗೆ ಪ್ರಥಮ ಸ್ಥಾನಿಯಾಗಿ ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದರೆ, ತಾಯಿ ಖಾಸಗಿಯಾಗಿ ಪರೀಕ್ಷೆ ಬರೆದು ಪ್ರಥಮ ಪ್ರಯತ್ನದಲ್ಲೇ ಪಾಸಾಗುವ ಮೂಲಕ ತಾಯಿ-ಮಗಳ ಫಲಿತಾಂಶಕ್ಕಾಗಿ ಇಡೀ ಕುಟುಂಬದ ಜೊತೆಗೆ ಊರೇ ಸಂಭ್ರಮ ಪಟ್ಟಿದೆ.
ಬಂಟ್ವಾಳ ತಾಲೂಕಿನ ಬಿ ಸಿ ರೋಡು ಸಮೀಪದ ಕೈಕಂಬ ನಿವಾಸಿ, ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಅವರ ಪತ್ನಿಯಾಗಿರುವ ನೇತ್ರಾವತಿ ವಿ ಆರ್ ಹಾಗೂ ಪುತ್ರಿ ಹೇಮಶ್ರೀ ಅವರೆ ಜೊತೆಯಾಗಿ ಪಿಯುಸಿ ಪಾಸ್ ಮಾಡಿದ ತಾಯಿ-ಮಗಳು. ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಹೇಮಶ್ರೀ 562 ಅಂಕಗಳನ್ನು ಗಳಿಸಿ ಡಿಸ್ಟಿಂಕ್ಷನ್ ಪಡೆಯುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ತಾಯಿ ನೇತ್ರಾವತಿ ವಿ ಆರ್ ಅವರು ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 257 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ನೇತ್ರಾವತಿ ಅವರಿಗೆ ವಿದ್ಯಾಭ್ಯಾಸ ಮುಂದುವರಿಸುವ ಮಹದಾಸೆ ಇದ್ದುದರಿಂದ ಮಗಳು ಕಾಲೇಜಿಗೆ ಸೇರಿದಾಗ ಪತಿಯ ಪೆÇ್ರೀತ್ಸಾಹದಿಂದ ತಾವೂ ಪರೀಕ್ಷೆ ಬರೆಯಲು ನಿರ್ಧರಿಸಿದ್ದಲ್ಲದೆ ಪರೀಕ್ಷೆ ಇದೀಗ ಪಾಸ್ ಆಗಿದ್ದು, ಮಗಳು ಕೂಡಾ ವಿಶಿಷ್ಟ ಶ್ರೇಣಿಯಲ್ಲಿ ಸಾಧನೆ ಮಾಡಿದ್ದು ಕುಟುಂಬದ ಸಂಭ್ರಮ ಇಮ್ಮಡಿಗೊಳ್ಳುವಂತಾಗಿದೆ.


















0 comments:
Post a Comment