ಎಚ್.ಪಿ.ಸಿ.ಎಲ್. ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ಆಲ್ಟ್ರಾ ಸೌಂಡ್ ಉಪಕರಣದ ಕೊಡುಗೆ - Karavali Times ಎಚ್.ಪಿ.ಸಿ.ಎಲ್. ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ಆಲ್ಟ್ರಾ ಸೌಂಡ್ ಉಪಕರಣದ ಕೊಡುಗೆ - Karavali Times

728x90

3 April 2026

ಎಚ್.ಪಿ.ಸಿ.ಎಲ್. ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ಆಲ್ಟ್ರಾ ಸೌಂಡ್ ಉಪಕರಣದ ಕೊಡುಗೆ

 ಮಂಗಳೂರು, ಎಪ್ರಿಲ್ 03, 2026 (ಕರಾವಳಿ ಟೈಮ್ಸ್) : ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ಹಿಂದೂಸ್ಥಾನ್ ಪೆಟ್ರೋಲಿಯಂ ಕಾಪೆರ್Çೀರೇಷನ್ ಲಿಮಿಟೆಡ್ (ಎಚ್ ಪಿ ಸಿ ಎಲ್) ಇದರ ಸಿ ಎಸ್ ಆರ್ ಅನುದಾನದಿಂದ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಅಲ್ಟ್ರಾ ಸೌಂಡ್ ಉಪಕರಣವನ್ನು ಕೊಡುಗೆಯಾಗಿ ಹಸ್ತಾಂತರಿಸಲಾಯಿತು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೈದ್ಯಕೀಯ ಅಧೀಕ್ಷಕ ಡಾ ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, ತಾಯಿ-ಮಕ್ಕಳ ಆರೋಗ್ಯ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸುತ್ತಾ ಬಂದಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಪ್ರತಿದಿನ 130ಕ್ಕಿಂತಲೂ ಹೆಚ್ಚು ಸ್ಕ್ಯಾನಿಂಗ್ ಗಳು ನಡೆಯುತ್ತಿದ್ದು, ಜನತೆಗೆ ಇನ್ನಷ್ಟು ಗುಣಮಟ್ಟದ ಸೇವೆ ನೀಡಲು ಈ ಉಪಕರಣ ಸಹಕಾರಿಯಾಗಲಿದೆ ಎಂದರು. 

ಉಪಕರಣದ ಅನಾವರಣಗೊಳಿಸಿದ ಕೆ.ಎಂ.ಸಿ. ಅಸೋಸಿಯೇಟ್ ಡೀನ್ ಡಾ ಅಶ್ಫಾಕ್ ಅಲಿ ಮಾತನಾಡಿ, ಕೆ.ಎಂ.ಸಿ ಹಾಗೂ ಸರಕಾರಿ ಸಹಭಾಗಿತ್ವದಿಂದ ನಡೆಯುತ್ತಿರುವ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಗೆ ವಿಶೇಷ ಅರ್ಥವಿದೆ. ಎಚ್.ಪಿ.ಸಿ.ಎಲ್. ಕೊಡುಗೆಯಾಗಿ ನೀಡಿದ ಈ ಉಪಕರಣವನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಲ್ಪಡುತ್ತದೆ ಎಂಬ ಭರವಸೆ ನೀಡಿದರು. 

ಕಾರ್ಯಕ್ರಮ ಉದ್ಘಾಟಿಸಿದ ಎಚ್.ಪಿ.ಸಿ.ಎಲ್. ಜನರಲ್ ಮ್ಯಾನೇಜರ್ ಅಜಿತ್ ಅವರು ಮಾತನಾಡಿ, ಲೇಡಿಗೋಷನ್ ಆಸ್ಪತ್ರೆಯ ವಿಸ್ತಾರವಾದ ಸೇವೆಯನ್ನು ಕೊಂಡಾಡಿದರಲ್ಲದೆ ಮುಂದಿನ ಹಂತಗಳಲ್ಲಿ ಮತ್ತಷ್ಟು ಅನುದಾನವನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಎಚ್.ಪಿ.ಸಿ.ಎಲ್ ಇದರ ದಿನೇಶನ್, ಅಶೀಶ್ ಅಭಿಮನ್ಯು, ಮೊಹಮ್ಮದ್ ಕಾಸಿಂ, ದ್ಯಾವರಿ ಭರತ್ ಕುಮಾರ್, ಕೆ.ಎಂ.ಸಿ. ಇದರ ಡಾ ನಿಖಿಲ್ ಶೆಟ್ಟಿ, ಡಾ ಸುಪ್ರಸನ್ನ, ಡಾ ಶ್ವೇತಾ ಪೂಜಾರಿ, ವೈದ್ಯಾಧಿಕಾರಿ ಡಾ ಜಗದೀಶ್ ಭಾಗವಹಿಸಿದ್ದರು. ಶ್ರೀಮತಿ ಲವೀನಾ ವಂದಿಸಿ ಶ್ರೀಮತಿ ಅಂಬಿಕಾ ಮತ್ತು ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಎಚ್.ಪಿ.ಸಿ.ಎಲ್. ವತಿಯಿಂದ ಲೇಡಿಗೋಷನ್ ಆಸ್ಪತ್ರೆಗೆ ಆಲ್ಟ್ರಾ ಸೌಂಡ್ ಉಪಕರಣದ ಕೊಡುಗೆ Rating: 5 Reviewed By: karavali Times
Scroll to Top