ವರ್ಷದ ಹಿಂದಿನ ಗಲಾಟೆ ಬಗ್ಗೆ ತಕರಾರು ಎಬ್ಬಿಸಿ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ : ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times ವರ್ಷದ ಹಿಂದಿನ ಗಲಾಟೆ ಬಗ್ಗೆ ತಕರಾರು ಎಬ್ಬಿಸಿ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ : ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times

728x90

14 April 2026

ವರ್ಷದ ಹಿಂದಿನ ಗಲಾಟೆ ಬಗ್ಗೆ ತಕರಾರು ಎಬ್ಬಿಸಿ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ : ಆರೋಪಿ ವಿಟ್ಲ ಪೊಲೀಸರ ವಶಕ್ಕೆ

ಬಂಟ್ವಾಳ, ಎಪ್ರಿಲ್ 14, 2026 (ಕರಾವಳಿ ಟೈಮ್ಸ್) : ವರ್ಷದ ಹಿಂದಿನ ಗಲಾಟೆ ಬಗ್ಗೆ ತಕರಾರು ಎಬ್ಬಿಸಿ ವ್ಯಕ್ತಿಗೆ ಕಲ್ಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಲ್ಲೆಗೊಳಗಾದವರನ್ನು ಮಾಣಿ ನಿವಾಸಿ ವಿಶ್ವನಾಥ (28) ಎಂದು ಹೆಸರಿಸಲಾಗಿದ್ದು, ಆರೋಪಿಯನ್ನು ನವೀನ್ ಎಂದು ಗುರುತಿಸಲಾಗಿದೆ. ಎಪ್ರಿಲ್ 12 ರಂದು ಸಂಜೆ ವಿಶ್ವನಾಥ್ ಮನೆಯಲ್ಲಿದ್ದಾಗ ಪರಿಚಯದ ಆರೋಪಿ ನವೀನ್ ಎಂಬಾತ ಬಂದು ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಗಲಾಟೆ ಬಗ್ಗೆ ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುತ್ತಾನೆ. ಹಲ್ಲೆಯಿಂದ ಗಾಯಗೊಂಡ ವಿಶ್ವನಾಥ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿಂ ನವೀನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ವರ್ಷದ ಹಿಂದಿನ ಗಲಾಟೆ ಬಗ್ಗೆ ತಕರಾರು ಎಬ್ಬಿಸಿ ವ್ಯಕ್ತಿಗೆ ಹಲ್ಲೆ, ಜೀವಬೆದರಿಕೆ : ಆರೋಪಿ ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top