ಬಂಟ್ವಾಳ, ಎಪ್ರಿಲ್ 14, 2026 (ಕರಾವಳಿ ಟೈಮ್ಸ್) : ಮನೆಯಲ್ಲಿ ಅಕ್ರಮ ಸ್ಫೋಟಕ ಸಾಮಾಗ್ರಿ ಸಂಗ್ರಹ ಮಾಡುತ್ತಿದ್ದ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿದ ಘಟನೆ ವಿಟ್ಲ-ಕಂಬಳಬೆಟ್ಟು ಬಳಿಯ ಅಮೈ ಎಂಬಲ್ಲಿ ಎಪ್ರಿಲ್ 13 ರಂದು ರಾತ್ರಿ ನಡೆದಿದೆ.
ಬಂಧಿತ ಆರೋಪಿಯನ್ನು ಇಲ್ಲಿನ ನಿವಾಸಿ ಜಗದೀಶ್ ಪೂಜಾರಿ ಎಂದು ಹೆಸರಿಸಲಾಗಿದೆ. ಈತ ಸುಡು ಮದ್ದುಗಳನ್ನು ತಯಾರು ಮಾಡುತ್ತಿದ್ದು, ಸದ್ರಿ ಸುಡುಮದ್ದಿಗೆ ಬೇಕಾಗುವ ಸ್ಪೋಟಕ ಸಾಮಾಗ್ರಿಗಳನ್ನು ಮನೆಯ ಆವರಣದಲ್ಲಿ ಯಾವುದೇ ಮುನ್ನೆಚ್ಚರಿಕೆ ವಹಿಸದೇ ಶೇಖರಿಸಿರುತ್ತಾರೆ ಎಂಬುದಾಗಿ ಬಂದ ಖಚಿತ ಮಾಹಿತಿ ಆಧರಿಸಿ ವಿಟ್ಲ ಠಾಣಾ ಪಿಎಸ್ಸೈ ಬಿ ಎಸ್ ನಾಯಕ್ ಅವರ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಸುಮಾರು 1.9 ಕೆಜಿಯಷ್ಟು ಸ್ಪೋಟಕದಂತಹ ಸಂಶಯಾಸ್ಪದ ವಸ್ತು ಪತ್ತೆಯಾಗಿರುತ್ತದೆ. ಈ ಬಗ್ಗೆ ವಿಟ್ಲ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


















0 comments:
Post a Comment