ಎಪ್ರಿಲ್ 28 ರಂದು ಸಂಜೆ (ನಾಳೆ) ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಜನಾಂದೋಲನ ನಡಿಗೆ - Karavali Times ಎಪ್ರಿಲ್ 28 ರಂದು ಸಂಜೆ (ನಾಳೆ) ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಜನಾಂದೋಲನ ನಡಿಗೆ - Karavali Times

728x90

27 April 2026

ಎಪ್ರಿಲ್ 28 ರಂದು ಸಂಜೆ (ನಾಳೆ) ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಜನಾಂದೋಲನ ನಡಿಗೆ

ಬಂಟ್ವಾಳ, ಎಪ್ರಿಲ್ 27, 2026 (ಕರಾವಳಿ ಟೈಮ್ಸ್) : ಜಿಲ್ಲೆಯ ಹೆದ್ದಾರಿಗಳಲ್ಲಿ ಅಂತರ ನಿಯಮ ಉಲ್ಲಂಘಿಸಿ ಹೊಸ ಟೋಲ್ ಗೇಟ್ ತೆರೆಯುವುದನ್ನು ವಿರೋಧಿಸಿ ಹಾಗೂ ನಿಯಮಬಾಹಿರ ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಆಶ್ರಯದಲ್ಲಿ ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ಎಪ್ರಿಲ್ 28 ರಂದು ಮಂಗಳವಾರ (ನಾಳೆ) ಸಂಜೆ 4 ಗಂಟೆಗೆ ಬಿ ಸಿ ರೋಡು ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾವರೆಗೆ ಬೃಹತ್ ಜನಾಂದೋಲನ ನಡಿಗೆ ನಡೆಯಲಿದೆ. ಟೋಲ್ ಗೇಟ್ ತೆರವುಗೊಳ್ಳುವವರೆಗೆ ವಿರಮಿಸಲಾರೆವು. ಈ ಹೋರಾಟದಲ್ಲಿ ಸಾರ್ವಜನಿಕರು ಕೈ ಜೋಡಿಸುವಂತೆ ಹೋರಾಟ ಸಮಿತಿಯ ಗೌರವಾಧ್ಯಕ್ಷ ಬಿ ರಮಾನಾಥ ರೈ ಹಾಗೂ ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು ಜಂಟಿ ಪ್ರಕಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಎಪ್ರಿಲ್ 28 ರಂದು ಸಂಜೆ (ನಾಳೆ) ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಜನಾಂದೋಲನ ನಡಿಗೆ Rating: 5 Reviewed By: karavali Times
Scroll to Top