ಬೈರಿಕಟ್ಟೆ : ಮಾದಕ ವಸ್ತು ಸೇವಿಸಿ ಅನುಚಿತ ವರ್ತನೆ ತೋರಿದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times ಬೈರಿಕಟ್ಟೆ : ಮಾದಕ ವಸ್ತು ಸೇವಿಸಿ ಅನುಚಿತ ವರ್ತನೆ ತೋರಿದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ - Karavali Times

728x90

27 April 2026

ಬೈರಿಕಟ್ಟೆ : ಮಾದಕ ವಸ್ತು ಸೇವಿಸಿ ಅನುಚಿತ ವರ್ತನೆ ತೋರಿದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ

ಬಂಟ್ವಾಳ, ಎಪ್ರಿಲ್ 27, 2026 (ಕರಾವಳಿ ಟೈಮ್ಸ್) : ಮಾದಕ ವಸ್ತು ಸೇವಿಸಿ ಸಾರ್ವಜನಿಕ ಸ್ಥಳದಲ್ಲಿ ಅನುಚಿತವಾಗಿ ವರ್ತಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದ ವ್ಯಕ್ತಿಯನ್ನು ವಿಟ್ಲ ಪೊಲೀಸರು ಬಂಧಿಸಿದ ಘಟನೆ ಕನ್ಯಾನ ಗ್ರಾಮದ ಬೈರಿಕಟ್ಟೆ ಎಂಬಲ್ಲಿ ಎಪ್ರಿಲ್ 25 ರಂದು ನಡೆದಿದೆ. 

ಬಂಧಿತ ಆರೋಪಿಯನ್ನು ಕುಳ ಗ್ರಾಮದ ನಿವಾಸಿ ಆರ್ ಮಹಮ್ಮದ್ ಝಾಕೀರ್ ಎಂದು ಹೆಸರಿಸಲಾಗಿದೆ. ಈತ ಬೈರಿಕಟ್ಟೆ ಪರಿಸರದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಮಲು ಪದಾರ್ಥ ಸೇವನೆ ಮಾಡಿ ಸಾರ್ವಜನಿಕರನ್ನು ಉದ್ದೇಶಿಸಿ ಹೀನಾಯವಾಗಿ ಮಾತನಾಡುತ್ತಾ ಅನುಚಿತವಾಗಿ ವರ್ತಿಸುತ್ತೀರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ವಿಟ್ಲ ಪೊಲೀಸ್ ಠಾಣಾ ಪಿಎಸ್ಸೈ ರತ್ನಕುಮಾರ ನೇತೃತ್ವದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ್ದಾರೆ. 

ಈತನನ್ನು ವಿಚಾರಿಸಿದ ಮಾದಕ ವಸ್ತು ಸೇವನೆ ಮಾಡಿರುವ ಬಗ್ಗೆ ಒಪ್ಪಿಕೊಂಡ ಹಿನ್ನಲೆಯಲ್ಲಿ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಈತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬೈರಿಕಟ್ಟೆ : ಮಾದಕ ವಸ್ತು ಸೇವಿಸಿ ಅನುಚಿತ ವರ್ತನೆ ತೋರಿದ ಆರೋಪಿ ವಿಟ್ಲ ಪೊಲೀಸರ ವಶಕ್ಕೆ Rating: 5 Reviewed By: karavali Times
Scroll to Top