ಮಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಎಪ್ರಿಲ್ 9 ರಂದು ಪಡೀಲ್ ಪ್ರಜಾ ಸೌಧದಲ್ಲಿ ನೇರ ಸಂದರ್ಶನ - Karavali Times ಮಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಎಪ್ರಿಲ್ 9 ರಂದು ಪಡೀಲ್ ಪ್ರಜಾ ಸೌಧದಲ್ಲಿ ನೇರ ಸಂದರ್ಶನ - Karavali Times

728x90

2 April 2026

ಮಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಎಪ್ರಿಲ್ 9 ರಂದು ಪಡೀಲ್ ಪ್ರಜಾ ಸೌಧದಲ್ಲಿ ನೇರ ಸಂದರ್ಶನ

ಮಂಗಳೂರು, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಮಂಗಳೂರು ಎಕ್ಸ್ ಪರ್ಟ್ ಕಾಲೇಜು, ಮಂಗಳೂರು ಕಲ್ಚರಲ್ ಹೈವೇ, ಹಾಗೂ ಕೆ.ಎನ್.ಎನ್.ಡಿ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್, ಮಂಗಳೂರು ಖಾಸಗಿ ಕಂಪೆನಿಗಳ ವತಿಯಿಂದ ಮಂಗಳೂರಿನಲ್ಲಿ ಖಾಲಿಯಿರುವ ಸರ್ವಿಸ್ ಪೆÇ್ರಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಇಂಜಿನಿಯರ್, ಸರ್ವೀಸ್ ಇಂಜಿನಿಯರ್, ಸರ್ವಿಸ್ ಟೆಕ್ನಿಶಿಯನ್, ಸಿಸ್ಟಮ್ ಆಪರೇಟರ್, ಫುಡ್ ಕುಕ್, ಹೆವಿ ವೆಹಿಕಲ್ ಡ್ರೈವರ್, ಮೆಕ್ಯಾನಿಕಲ್ ಟೆಕ್ನಿಶಿಯನ್, ಸೇಲ್ಸ್ ಮಾರ್ಕೆಟಿಂಗ್, ವೇರ್ ಹೌಸ್ ಅಸೋಸಿಯೇಟ್ಸ್, ಬ್ಯುಸಿನೆಸ್ ಡೆವಲಪ್‍ಮೆಂಟ್ ಮ್ಯಾನೇಜರ್, ಸೀನಿಯರ್ ವೇರ್ ಹೌಸ್ ಅಸೋಸಿಯೇಟ್ಸ್, ಆಫೀಸ್ ಎಕ್ಸಿಕ್ಯೂಟಿವ್, ಹಾಸ್ಟೆಲ್ ವಾರ್ಡನ್ ಹಾಗೂ ಸ್ಟಡಿ ಇನ್ವಿಜಿಲೇಟರ್ ಹುದ್ದೆಗಳಿಗೆ ಉದ್ಯೋಗದ ಅವಕಾಶ ಲಭ್ಯವಿದೆ. ಈ ಸಂಬಂಧ ನೇರ ಸಂದರ್ಶನವನ್ನು ಎಪ್ರಿಲ್ 9 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಪಡೀಲ್ ಪ್ರಜಾ ಸೌಧದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಆಯೋಜಿಸಲಾಗಿದೆ. 

ನೇರ ಸಂದರ್ಶನದಲ್ಲಿ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ, ಐ.ಟಿ.ಐ, ಡಿಪೆÇ್ಲೀಮಾ ವಿದ್ಯಾರ್ಹತೆ ಹೊಂದಿರುವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರಿನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಎಪ್ರಿಲ್ 9 ರಂದು ಪಡೀಲ್ ಪ್ರಜಾ ಸೌಧದಲ್ಲಿ ನೇರ ಸಂದರ್ಶನ Rating: 5 Reviewed By: karavali Times
Scroll to Top