ಬಂಟ್ವಾಳ, ಎಪ್ರಿಲ್ 16, 2026 (ಕರಾವಳಿ ಟೈಮ್ಸ್) : ಮಂಚಿ ಗ್ರಾಮದ ಕುಕ್ಕಾಜೆ ಮಸೀದಿ ಮುಂಭಾಗದಲ್ಲಿ ಆಪೆ ಗೂಡ್ಸ್ ಅಟೋ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಮೃತಪಟ್ಟು ಸವಾರ ಗಾಯಗೊಂಡ ಘಟನೆ ಎಪ್ರಿಲ್ 15 ರಂದು ರಾತ್ರಿ ವೇಳೆ ಸಂಭವಿಸಿದೆ.
ಮೃತ ಬೈಕ್ ಸಹಸವಾರನನ್ನು ಮನೀಶ್ ಎಂದು ಹೆಸರಿಸಲಾಗಿದ್ದು, ಗಾಯಗೊಂಡ ಸವಾರನನ್ನು ಉದಯ ಎಂದು ಹೆಸರಿಸಲಾಗಿದೆ. ಉದಯ ಅವರು ಬೈಕಿನಲ್ಲಿ ಮನೀಶ್ ಅವರನ್ನು ಸಹಸವಾರನನ್ನಾಗಿ ಕೂರಿಸಿಕೊಂಡು ಮಂಚಿ ಕಡೆಯಿಂದ ಕುಕ್ಕಾಜೆ ಕಡೆಗೆ ಸಂಚರಿಸುತ್ತಿದ್ದ ವೇಳೆ ಆಪೆ ಗೂಡ್ಸ್ ಅಟೋಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಹಣೆ ಹಾಗೂ ತಲೆಗೆ ಗಂಭೀರ ಗಾಯಗೊಂಡ ಮನೀಶ್ ಅವರು ಅಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸವಾರ ಉದಯ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಸಚಿನ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment