ಬಂಟ್ವಾಳ, ಎಪ್ರಿಲ್ 16, 2026 (ಕರಾವಳಿ ಟೈಮ್ಸ್) : ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ತಾಲೂಕು, ಮಚ್ಚಿನ ಗ್ರಾಮದ ಪಾಪುಂಜ ನಿವಾಸಿ ದಿವಂಗತ ಕೊರಗಪ್ಪ ಅವರ ಪತ್ನಿ ಸರಸ್ವತಿ (62) ಅವರೇ ಬಸ್ಸಿನಲ್ಲಿ ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ಎಪ್ರಿಲ್ 15 ರಂದು ಬೆಳಿಗ್ಗೆ 8.20ಕ್ಕೆ ತನ್ನ ಪುತ್ರಿ ಯೋಗಿತಾಳೊಂದಿಗೆ ಮಡಂತ್ಯಾರುನಿಂದ ಪೆÇಳಲಿಗೆ ಹೋಗುವರೇ ಮಡಂತ್ಯಾರಿನಿಂದ ಕೆಎ19 ಎಫ್3481 ನೋಂದಣಿ ಸಂಖ್ಯೆಯ ಕೆ ಎಸ್ ಆರ್ ಟಿ ಸಿ ಬಸ್ಸಿಗೆ ಹತ್ತಿದ್ದಾರೆ. ಬಸ್ಸಿನಲ್ಲಿ ರಶ್ ಇದ್ದು, ಮಗಳು ಸೀಟಿನಲ್ಲಿ ಕುಳಿತಿದ್ದು, ಸರಸ್ವತಿ ಅವರು ಬಸ್ಸಿನಲ್ಲಿ ನಿಂತುಕೊಂಡು ಪ್ರಯಾಣಿಸಿದ್ದಾರೆ. ಇವರು ಮನೆಯಿಂದ ಹೊರಡುವಾಗ ಸುಮಾರು 18 ಗ್ರಾಂ ತೂಕದ ಚಿನ್ನದ ಸರ ಕುತ್ತಿಗೆಗೆ ಧರಿಸಿದ್ದು, ಬಸ್ಸು ಹತ್ತುವ ಸಮಯ ಕುತ್ತಿಗೆಯಲ್ಲಿ ಚಿನ್ನದ ಸರ ಇತ್ತು. ಇವರು ತನ್ನ ಮಗಳೊಂದಿಗೆ ಬಿ ಸಿ ರೋಡಿನಲ್ಲಿ ಬಸ್ಸಿನಲ್ಲಿ ಇಳಿಯುವಾಗ ಬೆಳಿಗ್ಗೆ ಸುಮಾರು 9 ಗಂಟೆಗೆ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಾಣೆಯಾಗಿದೆ. ಈ ಬಗ್ಗೆ ಬಿ ಸಿ ರೋಡು ಬಸ್ಸು ನಿಲ್ದಾಣದವರೆಗೆ ಬಂದು ಬಸ್ಸಿನಲ್ಲಿ ಹುಡುಕಾಡಿದರೂ ಚಿನ್ನದ ಸರ ಸಿಕ್ಕಿಲ್ಲ. ಯಾರೋ ಕಳ್ಳರು ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಮಡಂತ್ಯಾರಿನಿಂದ ಬಿ ಸಿ ರೋಡಿಗೆ ಬರುವ ಸಮಯ ಬಸ್ಸಿನಲ್ಲಿ ಕಳ್ಳತನ ಮಾಡಿರುತ್ತಾರೆ. ಕಳ್ಳತನವಾದ ಚಿನ್ನದ ಸರದ ಮೌಲ್ಯ ಸುಮಾರು 2.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸರಸ್ವತಿ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment