ಕಾಸರಗೋಡು ಹಾಗೂ ಮಂಜೇಶ್ವರ ಕ್ಷೇತ್ರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚುನಾವಣಾ ಪ್ರಚಾರ - Karavali Times ಕಾಸರಗೋಡು ಹಾಗೂ ಮಂಜೇಶ್ವರ ಕ್ಷೇತ್ರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚುನಾವಣಾ ಪ್ರಚಾರ - Karavali Times

728x90

2 April 2026

ಕಾಸರಗೋಡು ಹಾಗೂ ಮಂಜೇಶ್ವರ ಕ್ಷೇತ್ರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚುನಾವಣಾ ಪ್ರಚಾರ

ಬಂಟ್ವಾಳ, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಕಾಸರಗೋಡು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಶ್ವಿನಿ ಎಂ ಎಲ್ ಅವರ ಚುನಾವಣಾ ಪ್ರಚಾರದ ಅಭಿಯಾನದಲ್ಲಿ ಬಂಟ್ವಾಳ ಶಾಸಕ ಯು ರಾಜೇಶ್ ನಾಯ್ಕ್ ಅವರು ನವಿ ಮುಂಬಾಯಿಯ ಪನ್ವೆಲ್ ಕ್ಷೇತ್ರದ ಶಾಸಕ ಪ್ರಶಾಂತ್ ಠಾಕೋರ್, ಪನ್ವೆಲ್ ಕಾಪೆರ್Çರೇಟರ್ ಸಂತೋಷ್ ಶೆಟ್ಟಿ ದಳಂದಿಲ ಅವರ ಜೊತೆ ಭಾಗವಹಿಸಿದರು.

ಕಾಸರಗೋಡು ಜಿಲ್ಲೆಯ ಕಾಸರಗೋಡು ಮತ್ತು ಎಡನೀರು ಬಿಜೆಪಿ ಕಚೇರಿಗೆ ಬೇಟಿ ನೀಡಿದ ಅವರು ಚುನಾವಣಾ ಪ್ರಚಾರದ ರೂಪುರೇಷೆಗಳ ಬಗ್ಗೆ ಚರ್ಚಿಸಿದರು. ಬಳಿಕ ಮುಳ್ಳೆರಿಯಾ ಭಾಗದ ಕಾರಡ್ಕ ಗ್ರಾ ಪಂ ವ್ಯಾಪ್ತಿಯ ಚುನಾವಣಾ ಪ್ರಭಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಚುನಾವಣಾ ದಿನದವರೆಗೂ ಬಿಜೆಪಿ ಮತವನ್ನು ಪಡೆಯುವ ಸಲುವಾಗಿ ಮತದಾರರ ಮನ ಪರಿವರ್ತನೆ ಮಾಡುವ ಕೆಲಸ ಮಾಡಬೇಕು. ಅತ್ಯಂತ ಅಮೂಲ್ಯವಾದ ಕ್ಷಣದಲ್ಲಿ ಚುನಾವಣೆ ನಡೆಯುತ್ತಿದ್ದು, ಭಾರತದ ವಿಕಸನ ಹೊಂದಬೇಕಾದರೆ ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿಯ ಗೆಲುವು ಅಗತ್ಯವಾಗಿದೆ. ಬಿಜೆಪಿ ಗೆಲುವು ಕಾರ್ಯಕರ್ತರ ಗೆಲುವಾಗಲಿದೆ, ಈ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು. 

ಈ ಸಂದರ್ಭ ರಾಜ್ಯ ಮಾಧ್ಯಮ ಪ್ರಮುಖ್ ವಿಕಾಸ್ ಪುತ್ತೂರು, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ಪ್ರಮುಖರಾದ ಕುಮಾರ್ ಅಳ್ವ, ಲೋಹಿತ್ ಪಣೋಲಿಬೈಲು ಹಾಗೂ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಮುಖರು ಜೊತೆಗಿದ್ದರು. 

ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೂ ಭೇಟಿ ನೀಡಿದ ಶಾಸಕ ರಾಜೇಶ್ ನಾಯಕ್ ಅವರು, ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಅವರನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.   ಬಳಿಕ  ಕಾರ್ಯಕರ್ತರ ಜೊತೆ ಕೆಲ ಹೊತ್ತು ಚುನಾವಣಾ ಸಿದ್ದತೆಗಳ ಬಗ್ಗೆ ಮಾತನಾಡಿದ ಅವರು ಮತದಾರರನ್ನು ಸಂಪರ್ಕ ಮಾಡುವ ಮತ್ತು ಮನಪರಿವರ್ತನೆ ಮೂಲಕ ಬಿಜೆಪಿಗೆ ಮತ ನೀಡುವಂತೆ ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸಿದರು. ಬಿಜೆಪಿ ಗೆಲುವು ಕಾರ್ಯಕರ್ತರ ಗೆಲುವು ಆಗುತ್ತದೆ. ಆ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡಿದಾಗ ಫಲಿತಾಂಶ ನಮ್ಮದಾಗುತ್ತದೆ ಎಂದರು. 

ಮತಯಾಚನೆ ವೇಳೆ ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಮಾಧವ ಮಾವೆ, ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಅಮ್ಮುಂಜೆ ಗ್ರಾಮಪಂಚಾಯತ್ ಮಾಜಿ ಸದಸ್ಯ ಕಾರ್ತಿಕ್ ಬಲ್ಲಾಳ್, ಮಂಜೇಶ್ವರ ಮಂಡಲದ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ಮಂಡಲದ ಕಾರ್ಯದರ್ಶಿ ಶ್ವೇತಾ ಶೆಟ್ಟಿ, ಪ್ರಮುಖರಾದ ಸುಖಿರಾಜ್ ಶೆಟ್ಟಿ, ಸಂತೋಷ್ ದೈಯಿಗೊಳಿ, ವಿನೋದ್ ರಾಜ್ ಸಾಮಾಣಿ, ಉದಯ ಪೂಜಾರಿ ಮುಟ್ಟುಂಜ, ಲತೀಶ್ ಜೊತೆಗಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಕಾಸರಗೋಡು ಹಾಗೂ ಮಂಜೇಶ್ವರ ಕ್ಷೇತ್ರದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಚುನಾವಣಾ ಪ್ರಚಾರ Rating: 5 Reviewed By: karavali Times
Scroll to Top