ಮಂಜೇಶ್ವರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ - Karavali Times ಮಂಜೇಶ್ವರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ - Karavali Times

728x90

2 April 2026

ಮಂಜೇಶ್ವರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್

ಮಂಗಳೂರು, ಎಪ್ರಿಲ್ 02, 2026 (ಕರಾವಳಿ ಟೈಮ್ಸ್) : ಕೇರಳ ವಿಧಾನಸಭಾ ಚುನಾವಣೆಯ ಅಂಗವಾಗಿ ಗಡಿಭಾಗದ ಪ್ರತಿಷ್ಠಿತ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ ಸುರೇಂದ್ರನ್ ಅವರ ಗೆಲುವಿಗಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕÀ ವೇದವ್ಯಾಸ ಕಾಮತ್ ಅವರು ಮನೆ ಮನೆಗೆ ತೆರಳಿ ಮತಯಾಚನೆ ನಡೆಸಿದರು.

ಮಂಜೇಶ್ವರದ ಪ್ರಸಿದ್ಧ ಪುಣ್ಯಕ್ಷೇತ್ರವಾದ ಶ್ರೀ ಮದನಂತೇಶ್ವರ ದೇವಸ್ಥಾನ ಹಾಗೂ ಕೀರ್ತೇಶ್ವರ ಪರಿಸರ, ಕುಂಬ್ಳೆ ಪಂಚಾಯತ್ ವ್ಯಾಪ್ತಿಯ ಕುಂಟಗೇರಡ್ಕದ ಪರಿಶಿಷ್ಟ ಪಂಗಡ ಕಾಲೋನಿ, ಗುಡ್ಡೆಕೇರಿ, ಬಡಾಜೆ ಪ್ರದೇಶಗಳು ಸೇರಿದಂತೆ ಹಲವು ಮನೆಗಳಿಗೆ ಕಾರ್ಯಕರ್ತರೊಂದಿಗೆ ಭೇಟಿ ನೀಡಿದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳು, ಸಾಧನೆಗಳನ್ನು ತಿಳಿಸಿ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮಂಜೇಶ್ವರದಲ್ಲಿ ಈ ಬಾರಿ ತಾವರೆ ಅರಳುವುದು ಶತ ಸಿದ್ದವಾಗಿದ್ದು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದರು.

ಪ್ರಮುಖರಾದ ರಮೇಶ್ ಹೆಗ್ಡೆ, ಪ್ರಶಾಂತ್ ಪೈ, ಪೂಜಾ ಪೈ, ವರುಣ್ ಅಂಬಟ್, ಯಾದವ ಬಡಾಜೆ, ಆದರ್ಶ್, ಹರೀಶ್ಚಂದ್ರ ಮಂಜೇಶ್ವರ ಮೊದಲಾದವರು ಈ ಸಂದರ್ಭ ಜೊತೆಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಮಂಜೇಶ್ವರ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ Rating: 5 Reviewed By: karavali Times
Scroll to Top