ಗೌಸಿಯಾ ಎಸೋಸಿಯೇಶನ್ ವತಿಯಿಂದ ಮಂಚಿಯಲ್ಲಿ ದಫ್ ಸ್ಪರ್ಧೆ : ರೆಂಜಾಡಿ ತಾಜುಲ್ ಹುದಾ ತಂಡಕ್ಕೆ ಪ್ರಶಸ್ತಿ - Karavali Times ಗೌಸಿಯಾ ಎಸೋಸಿಯೇಶನ್ ವತಿಯಿಂದ ಮಂಚಿಯಲ್ಲಿ ದಫ್ ಸ್ಪರ್ಧೆ : ರೆಂಜಾಡಿ ತಾಜುಲ್ ಹುದಾ ತಂಡಕ್ಕೆ ಪ್ರಶಸ್ತಿ - Karavali Times

728x90

21 April 2026

ಗೌಸಿಯಾ ಎಸೋಸಿಯೇಶನ್ ವತಿಯಿಂದ ಮಂಚಿಯಲ್ಲಿ ದಫ್ ಸ್ಪರ್ಧೆ : ರೆಂಜಾಡಿ ತಾಜುಲ್ ಹುದಾ ತಂಡಕ್ಕೆ ಪ್ರಶಸ್ತಿ

ಬಂಟ್ವಾಳ, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಮಂಚಿ-ಕೊಳ್ನಾಡು ಗೌಸಿಯಾ ಎಸೋಸಿಯೇಶನ್  ಇದರ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ಸನ್ಮಾನ ಕಾರ್ಯಕ್ರಮವು ಇಲ್ಲಿನ ಮರ್ಹೂಂ ಸುರಿಬೈಲು ಉಸ್ತಾದ್ ವೇದಿಕೆಯಲ್ಲಿ ಇತ್ತೀಚೆಗೆ ನಡೆಯಿತು. 

ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ಕಾರ್ಯಕ್ರಮ ಉದ್ಘಾಟಿಸಿದರು. ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ಕುಕ್ಕಾಜೆ ದುವಾ ನೆರವೇರಿಸಿದರು. ಮಂಚಿ ಮುಹಮ್ಮದಿಯಾ ಜುಮಾ ಮಸೀದಿಯ ಇಬ್ರಾಹಿಂ ಮದನಿ ಅಧ್ಯಕ್ಷತೆ ವಹಿಸಿದ್ದರು. 

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ ರಮಾನಾಥ ರೈ, ಸಾಲೆತ್ತೂರು ನಿತ್ಯಾಧರ್ ಚರ್ಚ್ ಧರ್ಮಗುರು ರೆ ಫಾ ಮನೋಜ್ ಫುರ್ಟಾಡೋ, ಅಸ್ಗರ್ ಅಲಿ ಮದನಿ, ಮುಹಮ್ಮದ್ ಅಲಿ ಸಖಾಫಿ ಅಶ್-ಅರಿಯ್ಯ, ಅಬೂಬಕ್ಕರ್ ಲತೀಫ್ ಎಣ್ಮೂರು, ಶಮ್ಮಾಸ್ ಅಶ್ಶಾಫೀ ಮರಕ್ಕಿಣಿ, ಅಬ್ದುಲ್ ಖಾದರ್ ದಾರಿಮಿ ಕೊಡಂಗಾಯಿ, ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ಕೆಡಿಪಿ ಸದಸ್ಯ ಹಾಜಿ ಎ ಬಿ ಅಬ್ದುಲ್ಲ, ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಇರಾ ಗ್ರಾ ಪಂ ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಬಂಟ್ವಾಳ ಪುರಸಭಾ ನಿಕಟಪೂರ್ವ ಉಪಾಧ್ಯಕ್ಷ ಮೂನಿಶ್ ಅಲಿ, ಬಂಟ್ವಾಳ ಎಸ್ ವಿ ಎಸ್ ಕಾಲೇಜು ಪ್ರಾಂಶುಪಾಲ ಎಂ ಡಿ ಮಂಚಿ, ದಫ್ ಎಸೋಸಿಯೇಶನ್ ಅಧ್ಯಕ್ಷ ಅಬ್ದುಲ್ ಲತೀಫ್ ನೇರಳಕಟ್ಟೆ, ಪ್ರಧಾನ ಕಾರ್ಯದರ್ಶಿ ಪಿ.ಎಂ ಅಶ್ರಫ್ ಪಾಣೆಮಂಗಳೂರು, ಬೋಳಂತೂರು ಗ್ರಾ ಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರ್ ರೈ ಬೋಳಂತೂರು, ಕೊಳ್ನಾಡು ಗ್ರಾ ಪಂ ಮಾಜಿ ಸದಸ್ಯ ಅಬೂಬಕ್ಕರ್ ಸಿ ಎಚ್, ಸಜಿಪಮೂಡ ಗ್ರಾ ಪಂ ಸದಸ್ಯ ಕರೀಂ ಬೊಳ್ಳಾಯಿ, ಉದ್ಯಮಿಗಳಾದ ಹಂಝ ಆನಿಯಾ ಬಸ್ತಿಕೋಡಿ, ಚೊಯಿಸ್ ಗೋಲ್ಡ್ ಅಶ್ರಫ್ ನಾಡಾಜೆ, ಶಿಯಾನ್, ಶರೀಫ್ ತಲಕ್ಕಿ, ಅಬ್ದುಲ್ ರಹಿಮಾನ್ ನಿರ್ಬೈಲು, ಪ್ರಮುಖರಾದ ನಾರಾಯಣ ಶೆಟ್ಟಿ ಕುಲ್ಯಾರು, ನಾರಾಯಣ ಭಟ್ ನೂಜಿಬೈಲು, ನಾರಾಯಣ ಭಟ್ ಕಯ್ಯೂರು, ರಾಮ್ ಪ್ರಸಾದ್ ರೈ ತಿರುವಾಜೆ, ನ್ಯಾಯವಾದಿ ಮೋಹನ್ ಗುಂಟೂರು ಮೊದಲಾದವರು ಭಾಗವಹಿಸಿದ್ದರು. ನಿಸಾರ್ ಮಂಚಿ, ಎಂ ಎಚ್ ಫ್ಯಾಮಿಲಿ, ದಾವೂದ್ ಕೈಯೂರ್, ರಫೀಕ್ ಸರೀತ್ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು.

ಗೌಸಿಯಾ ಎಸೋಸಿಯೇಶನ್ ಅಧ್ಯಕ್ಷ ಅಬೂಬಕ್ಕರ್ ಕೈಯೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೂಸಾ, ದಫ್ ಸ್ಪರ್ಧೆ ಸ್ವಾಗತ ಸಮಿತಿ ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಜಿ ಮಂಚಿ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮಂಚಿ ಮೊದಲಾದವರು ಉಪಸ್ಥಿತರಿದ್ದರು. 

ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಮಂಗಳೂರು ವಿವಿ ಡಾಕ್ಟರೇಟ್ ಪದವಿ ಪುರಸ್ಕೃತ ಅಕ್ಷರ ಸಂತ ಡಾ ಹರೇಕಳ ಹಾಜಬ್ಬ ಹಾಗೂ ಸಂಘಟಕ ಲತೀಫ್ ಮಾರಿಪಳ್ಳ ಅವರನ್ನು ಸನ್ಮಾನಿಸಲಾಯಿತು.

ಮಹಮ್ಮದ್ ಇಕ್ಬಾಲ್ ಮಂಚಿ ಸ್ವಾಗತಿಸಿ, ಮುಹಮ್ಮದ್ ಮಂಚಿ ಪ್ರಸ್ತಾವನೆಗೈದರು. ಅಬೂಬಕ್ಕರ್ ಕೈಯೂರ್ ವಂದಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು. 

ತಾಜುಲ್ ಹುದಾ ರೆಂಜಾಡಿ ತಂಡಕ್ಕೆ ದಫ್ ಪ್ರಶಸ್ತಿ

ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ದೇರಳಕಟ್ಟೆ, ಬೆಳ್ಮ-ರೆಂಜಾಡಿಯ ತಾಜುಲ್ ಹುದಾ ದಫ್ ತಂಡ ಪ್ರಥಮ, ಕಟಪಾಡಿ-ಮಣಿಪುರದ ಖಲಂದರ್ ಷಾ ದಫ್ ತಂಡ ದ್ವಿತೀಯ, ಕನ್ನಂಗಾರ್ ಇಶಾ-ಅತಿಸ್ಸುನ್ನ ದಫ್ ತಂಡ ತೃತೀಯ ಹಾಗೂ ಉಳ್ಳಾಲ-ಅಕ್ಕರೆಕರೆ ಅಲ್-ಜಝೀರಾ ದಫ್ ತಂಡ ಚತುರ್ಥ ಸ್ಥಾನವನ್ನು ತಮ್ಮದಾಗಿಸಿಕೊಂಡಿತು. ತಾಜುಲ್ ಹುದಾ ದಫ್ ತಂಡದ ಆಸಿಫ್ ಕಾಸರಗೋಡು ನೇತೃತ್ವದ ಹಾಡುಗಾರರು ಹಾಡುಗಾರಿಕೆ ಪ್ರಶಸ್ತಿ ಪಡೆದುಕೊಂಡರು. ರಶೀದ್ ನಂದಾವರ, ತೌಸೀಫ್ ಕಣ್ಣೂರು ಹಾಗೂ ಇರ್ಶಾದ್ ಪಾಣೆಮಂಗಳೂರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಗೌಸಿಯಾ ಎಸೋಸಿಯೇಶನ್ ವತಿಯಿಂದ ಮಂಚಿಯಲ್ಲಿ ದಫ್ ಸ್ಪರ್ಧೆ : ರೆಂಜಾಡಿ ತಾಜುಲ್ ಹುದಾ ತಂಡಕ್ಕೆ ಪ್ರಶಸ್ತಿ Rating: 5 Reviewed By: karavali Times
Scroll to Top