ಬಿ.ಸಿ.ರೋಡು : ವಾಕಿಂಗ್ ವೇಳೆ ಕುಸಿದು ಬಿದ್ದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೃತ್ಯು - Karavali Times ಬಿ.ಸಿ.ರೋಡು : ವಾಕಿಂಗ್ ವೇಳೆ ಕುಸಿದು ಬಿದ್ದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೃತ್ಯು - Karavali Times

728x90

21 April 2026

ಬಿ.ಸಿ.ರೋಡು : ವಾಕಿಂಗ್ ವೇಳೆ ಕುಸಿದು ಬಿದ್ದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೃತ್ಯು

 ಬಂಟ್ವಾಳ, ಎಪ್ರಿಲ್ 21, 2026 (ಕರಾವಳಿ ಟೈಮ್ಸ್) : ಕರ್ತವ್ಯ ನಿರ್ವಹಿಸಿ ವಿಶ್ರಾಂತಿಯ ನಡುವೆ ವಾಕಿಂಗ್ ಮಾಡುತ್ತಿದ್ದ ವೇಳೆ ಕೆ ಎಸ್ ಆರ್ ಟಿ ಸಿ ಬಸ್ ಚಾಲಕ ಕುಸಿದು ಬಿದ್ದು ಮೃತಪಟ್ಟ ಘಟನೆ ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಎಪ್ರಿಲ್ 18 ರಂದು ಸಂಭವಿಸಿದೆ. 

ಮೃತರನ್ನು ವಿಜಯಪುರ ಮೂಲದ ನಿವಾಸಿ ಲಾಡಲೇ ಪಟೇಲ್ ಎಂದು ಹೆಸರಿಸಲಾಗಿದೆ. ಇವರು ಕಳೆದ 16 ವರ್ಷಗಳಿಂದ ಬಿ ಸಿ ರೋಡು ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎಪ್ರಿಲ್ 18 ರಂದು ಬೆಳಿಗ್ಗೆ ಕರ್ತವ್ಯ ನಿರ್ವಹಿಸಿ ಡಿಪೋದ ವಿಶ್ರಾಂತಿ ಗೃಹದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು, ಬಳಿಕ ಸಂಜೆ 7.15ಕ್ಕೆ ವಿಶ್ರಾಂತಿ ಗೃಹದ ಪಕ್ಕ ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಗೆ ಸ್ಪಂದಿಸದ ಅವರು ರಾತ್ರಿ 80.20ರ ವೇಳೆಗೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 

ಈ ಬಗ್ಗೆ ಮೃತರ ಸಂಬಂಧಿ ಸದ್ದಾಂ ಹುಸೇನ್ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ವಾಕಿಂಗ್ ವೇಳೆ ಕುಸಿದು ಬಿದ್ದು ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಮೃತ್ಯು Rating: 5 Reviewed By: karavali Times
Scroll to Top