ಪ್ರತಿಭಟನೆ ವೇಳೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಅವ್ಯವಸ್ಥೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಸಾಗಿ ಬಂದ ತುರ್ತು ಸೇವೆಯ ಅಂಬ್ಯುಲೆನ್ಸ್ ವಾಹನ - Karavali Times ಪ್ರತಿಭಟನೆ ವೇಳೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಅವ್ಯವಸ್ಥೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಸಾಗಿ ಬಂದ ತುರ್ತು ಸೇವೆಯ ಅಂಬ್ಯುಲೆನ್ಸ್ ವಾಹನ - Karavali Times

728x90

28 April 2026

ಪ್ರತಿಭಟನೆ ವೇಳೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಅವ್ಯವಸ್ಥೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಸಾಗಿ ಬಂದ ತುರ್ತು ಸೇವೆಯ ಅಂಬ್ಯುಲೆನ್ಸ್ ವಾಹನ

ಬಂಟ್ವಾಳ, ಎಪ್ರಿಲ್ 28, 2026 (ಕರಾವಳಿ ಟೈಮ್ಸ್) : ಬ್ರಹ್ಮರಕೂಟ್ಲು ಟೋಲ್ ಗೇಟ್ ಅವೈಜ್ಞಾನಿಕತೆ ಹಾಗೂ ಅವ್ಯವಸ್ಥೆ ವಿರುದ್ದ ಹೋರಾಟ ಸಮಿತಿ ವತಿಯಿಂದ ಮಂಗಳವಾರ ಸಂಜೆ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಅವ್ಯವಸ್ಥೆಗೆ ಜೀವಂತ ಸಾಕ್ಷಿ ಎಂಬಂತೆ ಎರಡು ಅಂಬ್ಯುಲೆನ್ಸ್ ತುರ್ತು ವಾಹನಗಳು ಧಾವಿಸಿ ಬಂದವು. 

ತುಂಬೆ ಕಡೆಯಿಂದ ಬಿ ಸಿ ರೋಡು ಕಡೆಗೆ ಒಂದೇ ಲೇನಿನಲ್ಲಿ ಎರಡು ಅಂಬ್ಯುಲೆನ್ಸ್ ತುರ್ತು ವಾಹನಗಳು ಧಾವಿಸಿ ಬಂದಿದ್ದು, ನಿರಂತರ ಸೈರನ್ ಮೊಳಗುತ್ತಿತ್ತು. ಮೊದಲೇ ಇಲ್ಲಿನ ಟೋಲ್ ಬೂತಿನಲ್ಲಿ ಅವ್ಯವಸ್ಥೆ, ಜೊತೆಗೆ ಪ್ರತಿಭಟನೆ ಕಾವಿನಿಂದಾಗಿ ಉಂಟಾಗಿರುವ ಟ್ರಾಫಿಕ್ ಜಾಂ ಮಧ್ಯೆ ಅಂಬ್ಯುಲೆನ್ಸ್ ವಾಹನಗಳು ಅವ್ಯವಸ್ಥೆಗೆ ಸಾಕ್ಷಿಯಾದವು. ಬಳಿಕ ಬಂದೋಬಸ್ತಿನಲ್ಲಿದ್ದ ಪೊಲೀಸರು ಹಾಗೂ ಪ್ರತಿಭಟನಾಕಾರರು ತಕ್ಷಣ ಗುಂಪು ಬದಿಗೆ ಸರಿಸಿ ಅಂಬ್ಯುಲೆನ್ಸ್ ವಾಹನದ ಓಡಾಟಕ್ಕೆ ವ್ಯವಸ್ಥೆ ಮಾಡಿಕೊಟ್ಟು ಕರ್ತವ್ಯ ಪ್ರಜ್ಞೆ ಮೆರೆದರು. 

ಅಂಬ್ಯುಲೆನ್ಸ್ ವಾಹನಗಳಿಗೆ ಇಲ್ಲಿನ ಟೋಲ್ ಗೇಟಿನಲ್ಲಿ ಯಾವುದೇ ಪ್ರತ್ಯೇಕ ಲೇನ್ ಇಲ್ಲದ ಪರಿಣಾಮ ನಿತ್ಯವೂ ಇಲ್ಲಿ ತುರ್ತು ಸೇವೆಯ ವಾಹನಗಳು ಪರದಾಟ ನಡೆಸುತ್ತಿರುವ ಸನ್ನಿವೇಶಗಳು ಕಂಡು ಬರುತ್ತಲೇ ಇರುತ್ತವೆ. 

Next
This is the most recent post.
Older Post
  • Blogger Comments
  • Facebook Comments

0 comments:

Post a Comment

Item Reviewed: ಪ್ರತಿಭಟನೆ ವೇಳೆ ಬ್ರಹ್ಮರಕೂಟ್ಲು ಟೋಲ್ ಗೇಟ್ ಅವ್ಯವಸ್ಥೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ಸಾಗಿ ಬಂದ ತುರ್ತು ಸೇವೆಯ ಅಂಬ್ಯುಲೆನ್ಸ್ ವಾಹನ Rating: 5 Reviewed By: karavali Times
Scroll to Top