ಟೋಲ್ ಗೇಟ್ ವಿಷಯದಲ್ಲಿ ಜನರ ತಾಳ್ಮೆ ಪರೀಕ್ಷಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ : ರಮಾನಾಥ ರೈ ಎಚ್ಚರಿಕೆ - Karavali Times ಟೋಲ್ ಗೇಟ್ ವಿಷಯದಲ್ಲಿ ಜನರ ತಾಳ್ಮೆ ಪರೀಕ್ಷಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ : ರಮಾನಾಥ ರೈ ಎಚ್ಚರಿಕೆ - Karavali Times

728x90

28 April 2026

ಟೋಲ್ ಗೇಟ್ ವಿಷಯದಲ್ಲಿ ಜನರ ತಾಳ್ಮೆ ಪರೀಕ್ಷಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ : ರಮಾನಾಥ ರೈ ಎಚ್ಚರಿಕೆ

ಬಂಟ್ವಾಳ, ಎಪ್ರಿಲ್ 28, 2026 (ಕರಾವಳಿ ಟೈಮ್ಸ್) : ಅವೈಜ್ಞಾನಿಕವಾಗಿ ಹಾಗೂ ಅಂತರ ನಿಯಮ ಉಲ್ಲಂಘಿಸಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟ್ ಗಳ ವಿರುದ್ದ ಜನಾಕ್ರೋಶ ಭುಗಿಲೆದ್ದಿದ್ದು, ಈ ಬಗ್ಗೆ ಕೇಂದ್ರ ಸರಕಾರ ಹಾಗೂ ಹೆದ್ದಾರಿ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೆ ಜನರ ತಾಳ್ಮೆ ಪರೀಕ್ಷಿಸಿದ್ದೇ ಆದಲ್ಲಿ ಪರಿಣಾಮ ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿರಲಿದೆ ಎಂದು ಮಾಜಿ ಸಚಿವ, ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಎಚ್ಚರಿಕೆ ನೀಡಿದರು. 

ಜಿಲ್ಲೆಯ ಹೆದ್ದಾರಿಗಳಲ್ಲಿ ಅಂತರ ನಿಯಮ ಉಲ್ಲಂಘಿಸಿ ಹೊಸ ಟೋಲ್ ಗೇಟ್ ತೆರೆಯುವುದನ್ನು ವಿರೋಧಿಸಿ ಹಾಗೂ ನಿಯಮಬಾಹಿರ ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಹೋರಾಟ ಸಮಿತಿ ಆಶ್ರಯದಲ್ಲಿ ಸಮಾನ ಮನಸ್ಕ ಸಂಘಟನೆಗಳ ಬೆಂಬಲದೊಂದಿಗೆ ಮಂಗಳವಾರ ಸಂಜೆ ಬಿ ಸಿ ರೋಡು ನಾರಾಯಣ ಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾವರೆಗೆ ಬೃಹತ್ ಜನಾಂದೋಲನ ನಡಿಗೆಯ ಬಳಿಕ ಟೋಲ್ ಪ್ಲಾಝಾ ಸಮೀಪ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟೋಲ್ ಗೇಟ್ ನಿಯಮ ಪಾಲನೆ ಮಾಡಿ ಸಕಲ ಸುಸಜ್ಜಿತ ವ್ಯವಸ್ಥೆ ಕೈಗೊಂಡು ಮಾತ್ರ ಸುಂಕ ವಸೂಲಿ ಮಾಡತಕ್ಕದ್ದು. ಅದು ಬಿಟ್ಟು ಬೇಕಾಬಿಟ್ಟಿ ವಸೂಲಾತಿ ಕೇಂದ್ರ ಮುನ್ನಡೆಸಲು ಹೋರಾಟ ಸಮಿತಿ ಅವಕಾಶ ನೀಡುವುದಿಲ್ಲ ಎಂದರು. 

ಯಾವುದೇ ರಾಜಕೀಯ ಪಕ್ಷಗಳ ಬ್ಯಾನರ್ ಇಲ್ಲದೆ ಕೇವಲ ಸಮಾನ ಮನಸ್ಕ ನಾಗರಿಕರ ಜೊತೆ ಸೇರಿ ಜಾತ್ಯಾತೀತವಾಗಿ, ವರ್ಗ ಬೇಧ ಮರೆತು ಕೇವಲ ಸಮಸ್ಯೆ ಪರಿಹಾರಕ್ಕೆ ಈ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಸಂಬಂಧಪಟ್ಟವರು ಪ್ರತಿಭಟನಾಕಾರರ ಕೂಗು ಕೇಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಎಚ್ಚರಿಸಿದರು. 

ಬಿ ಸಿ ರೋಡು ಮುಖ್ಯ ವೃತ್ತದ ಬಳಿಯಿಂದ ಬೃಹತ್ ಜನಾಂದೋಲನ ನಡಿಗೆ ಎಂಬ ಧ್ಯೇಯವಾಕ್ಯದಿಂದ ಕಾಲ್ನಡಿಗೆಯಲ್ಲಿ ಸಾಗಿ ಬಂದ ಪ್ರತಿಭಟನಾಕಾರರು ಬ್ರಹ್ಮರಕೂಟ್ಲು ಟೋಲ್ ಗೇಟ್ ಮುಂದೆ ಜಮಾಯಿಸಿ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಟೋಲ್ ಗೇಟ್ ಸಿಬ್ಬಂದಿಗಳ ಜೊತೆ ಕೆಲ ಕಾಲ ವಾಗ್ವಾದ ನಡೆಸಿದ ಪ್ರತಿಭಟನಾಕಾರರನ್ನು ಬಂಟ್ವಾಳ ನಗರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಪೊಲೀಸರು ಪರಿಸ್ಥಿತಿ ನಿಭಾಯಿಸಿದರು. 

ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಬಿ ಶೇಖರ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು. ಬಂಟ್ವಾಳ ಸಮಾನ ಮನಸ್ಕ ಸಂಘಟನೆಯ ಅಧ್ಯಕ್ಷ ಮೋಹನ್ ಶೆಟ್ಟಿ, ಪ್ರಮುಖರಾದ ಬಿ ಶೇಖರ್, ಪಿಯೂಸ್ ಎಲ್ ರೋಡ್ರಿಗಸ್, ಹಾಜಿ ಉಸ್ಮಾನ್ ಕರೋಪಾಡಿ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ ಎಸ್ ಮುಹಮ್ಮದ್, ಬಿ ಎಂ ಅಬ್ಬಾಸ್ ಅಲಿ, ಬೇಬಿ ಕುಂದರ್, ಅಶ್ವನಿ ಕುಮಾರ್ ರೈ, ರಾಮಣ್ಣ ವಿಟ್ಲ, ಸುಹೈಲ್ ಖಂದಕ್, ಪದ್ಮಶೇಖರ್ ಜೈನ್, ಪದ್ಮನಾಭ ರೈ, ಯೂಸುಫ್ ಕರಂದಾಡಿ, ಉಮೇಶ್ ಬೋಳಂತೂರು, ಎ ಬಿ ಅಬ್ದುಲ್ಲ, ಇಬ್ರಾಹಿಂ ನವಾಝ್, ಭರತ್ ಮುಂಡೋಡಿ, ಸುದರ್ಶನ್ ಜೈನ್, ಕೆ ಎಂ ಮುಸ್ತಫಾ, ವಾಸು ಪೂಜಾರಿ, ಅಶ್ರಫ್ ಕೆ ಮಂಗಳೂರು, ಶಶಿಧರ ಹೆಗ್ಡೆ, ನವೀನ್ ಡಿ ಸೋಜ, ಸುರೇಶ್ ಜೋರಾ, ಮುಹಮ್ಮದ್ ಅಲಿ ಪುತ್ತೂರು, ಉಮ್ಮರ್ ಫಾರೂಕ್ ಫರಂಗಿಪೇಟೆ, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಮಾಯಿಲಪ್ಪ ಸಾಲ್ಯಾನ್, ಸುದೀಪ್ ಕುಮಾರ್ ಶೆಟ್ಟಿ, ಸಿದ್ದೀಕ್ ಗುಡ್ಡೆಅಂಗಡಿ, ಹನೀಫ್ ಬಗ್ಗುಮೂಲೆ, ಬಿ ಎಂ ಭಟ್, ಸುರೇಶ್ ಕುಮಾರ್, ರಮ್ಲಾನ್ ಮಾರಿಪಳ್ಳ, ಕೆ ಕೆ ಶಾಹುಲ್ ಹಮೀದ್, ಲುಕ್ಮಾನ್ ಬಿ ಸಿ ರೋಡು, ಲೋಲಾಕ್ಷ ಶೆಟ್ಟಿ, ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಪ್ರಕಾಶ್ ಶೆಟ್ಟಿ ಶ್ರೀಶೈಲ ತುಂಬೆ, ಜಗದೀಶ್ ಕೊಯಿಲ, ಬಾಲಕೃಷ್ಣ ಕೊಡಾಜೆ, ಯಾದವ ಶೆಟ್ಟಿ, ಸುಧಾಕರ ಶೆಣೈ ಖಂಡಿಗ, ಚಿತ್ತರಂಜನ್ ಶೆಟ್ಟಿ, ಇಕ್ಬಾಲ್ ಜೆಟಿಟಿ, ಶರೀಫ್ ನಂದಾವರ, ಶಮೀರ್ ನಂದಾವರ, ಅಡ್ವಕೇಟ್ ತುಳಸೀದಾಸ್, ಸುರೇಶ್ ಪೂಜಾರಿ, ಚಿದಾನಂದ, ಸಿದ್ದೀಕ್ ಸರವು, ಐಡಾ ಸುರೇಶ್, ಶೈಲಜಾ ರಾಜೇಶ್, ಮುಹಮ್ಮದ್ ನಂದಾವರ, ಸಿರಾಜ್ ಮದಕ, ಜೋಕಿಂ ಡಿ ಸೋಜ, ಸುಭಾಶ್ಚಂದ್ರ ಶೆಟ್ಟಿ, ಲಾದ್ರು ಮೆನೇಜಸ್, ಶರೀಫ್ ಭೂಯಾ, ಅಲ್ತಾಫ್ ಕುಳಾಯಿ, ಕರೀಂ ಬೊಳ್ಳಾಯಿ, ಉಮ್ಮರ್ ಕುಂಞÂ ಸಾಲೆತ್ತೂರು, ಅಲ್ತಾಫ್ ಸಿದ್ದಕಟ್ಟೆ, ಸ್ಟೀವನ್ ಡಿಸೋಜ, ಅರ್ಶದ್ ಸರವು, ಶಬೀರ್ ಸಿದ್ದಕಟ್ಟೆ, ಡೆಂಝಿಲ್ ನೊರೊನ್ಹಾ, ಜಯಂತಿ ಪೂಜಾರಿ, ರಿಯಾಝ್ ನೆಹರುನಗರ, ಹಸನಬ್ಬ ನೆಹರುನಗರ, ಬದ್ರುದ್ದೀನ್ ಪೊನ್ನೋಡಿ, ಶಾರೂಕ್ ಕಾರಾಜೆ, ಇಸ್ಮಾಯಿಲ್ ಅರಬಿ, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಟೋಲ್ ಗೇಟ್ ವಿಷಯದಲ್ಲಿ ಜನರ ತಾಳ್ಮೆ ಪರೀಕ್ಷಿಸಿದರೆ ಪರಿಸ್ಥಿತಿ ನೆಟ್ಟಗಿರಲ್ಲ : ರಮಾನಾಥ ರೈ ಎಚ್ಚರಿಕೆ Rating: 5 Reviewed By: karavali Times
Scroll to Top