ಫರಂಗಿಪೇಟೆ : ಮೌಲಾನಾ ಅಝಾದ್ ಪಬ್ಲಿಕ್ ಸ್ಕೂಲಿಗೆ 100 ಶೇಕಡಾ ಫಲಿತಾಂಶ : ಸ್ಪೀಕರ್ ಯು.ಟಿ. ಖಾದರ್ ಮುತುವರ್ಜಿಗೆ ವಿದ್ಯಾರ್ಥಿಗಳ ಸಾಧನೆಯ ಕೃತಜ್ಞತೆ - Karavali Times ಫರಂಗಿಪೇಟೆ : ಮೌಲಾನಾ ಅಝಾದ್ ಪಬ್ಲಿಕ್ ಸ್ಕೂಲಿಗೆ 100 ಶೇಕಡಾ ಫಲಿತಾಂಶ : ಸ್ಪೀಕರ್ ಯು.ಟಿ. ಖಾದರ್ ಮುತುವರ್ಜಿಗೆ ವಿದ್ಯಾರ್ಥಿಗಳ ಸಾಧನೆಯ ಕೃತಜ್ಞತೆ - Karavali Times

728x90

23 April 2026

ಫರಂಗಿಪೇಟೆ : ಮೌಲಾನಾ ಅಝಾದ್ ಪಬ್ಲಿಕ್ ಸ್ಕೂಲಿಗೆ 100 ಶೇಕಡಾ ಫಲಿತಾಂಶ : ಸ್ಪೀಕರ್ ಯು.ಟಿ. ಖಾದರ್ ಮುತುವರ್ಜಿಗೆ ವಿದ್ಯಾರ್ಥಿಗಳ ಸಾಧನೆಯ ಕೃತಜ್ಞತೆ

 ಬಂಟ್ವಾಳ, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : ಪುದು ಗ್ರಾಮದ ಮಾರಿಪಳ್ಳ-ಸುಜೀರಿನ ಮೌಲಾನಾ ಆಝಾದ್ ಪಬ್ಲಿಕ್ ಸ್ಕೂಲ್ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ಫಲಿತಾಂಶ ದಾಖಲಿಸಿ ಸಾಧನೆ ಮಾಡಿದೆ. 

ಇಲ್ಲಿನ ಪರೀಕ್ಷೆಗೆ ಹಾಜರಾದ ಒಟ್ಟು 23 ವಿದ್ಯಾರ್ಥಿಗಳಲ್ಲಿ 5 ಮಂದಿ ಪ್ರಥಮ ಶ್ರೇಣಿಯಲ್ಲಿ, 15 ಮಂದಿ ದ್ವೀತಿಯ ಶ್ರೇಣಿಯಲ್ಲಿ ಹಾಗೂ 3 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.  ವಿದ್ಯಾರ್ಥಿನಿ ಆಯಿಷಾ ಆಸೀಫ 84 ಶೇಕಡಾ ಫಲಿತಾಂಶದೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 83.4 ಶೇಕಡಾ ಫಲಿತಾಂಶ ದಾಖಲಿಸಿರುವ ಆಯಿಷಾ ಜಝೀಲಾ ದ್ವಿತೀಯ ಸ್ಥಾನ, 79.2 ಶೇಕಡಾ ಅಂಕ ಪಡೆದಿರುವ ಖತೀಜ ಮಾಹಿನ್ ತೃತೀಯ ಸ್ಥಾನ ಪಡೆದಿರುತ್ತಾರೆ. 

ಕ್ಷೇತ್ರದ ಶಾಸಕರೂ ಆಗಿರುವ ರಾಜ್ಯ ವಿಧಾನಸಭಾ ಸ್ಪೀಕರ್ ಅವರ ವಿಶೇಷ ಮುತುವರ್ಜಿಯಿಂದಾಗಿ ಅಲ್ಪಸಂಖ್ಯಾತ ಇಲಾಖೆಯ ಈ ಮೌಲಾನಾ ಅಝಾದ್ ಪಬ್ಲಿಕ್ ಶಾಲೆಯನ್ನು ಪುದು ಗ್ರಾಮದ ಫರಂಗಿಪೇಟೆಗೆ ಮಂಜೂರುಗೊಂಡು ಮಾರಿಪಳ್ಳದ ಸುಜೀರುವಿನಲ್ಲಿ ಕಾರ್ಯಾರಂಭ ಮಾಡಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅವರ ಪರಿಶ್ರಮಕ್ಕೆ ತಕ್ಕಂತೆ ಇದೀಗ ಇಲ್ಲಿನ ಎಲ್ಲ ವಿದ್ಯಾರ್ಥಿಗಳು ತೇರ್ಗಡೆಯಾಗಿ ನೂರು ಶೇಕಡಾ ಫಲಿತಾಂಶ ದಾಖಲಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆ ಹಾಗೂ ಇಲ್ಲಿನ ಪ್ರಾಂಶುಪಾಲರು ಮತ್ತು ಶಿಕ್ಷಕ ವರ್ಗದ ಕಾರ್ಯವೈಖರಿಯನ್ನು ಜಿ ಪಂ ಮಾಜಿ ಸದಸ್ಯ ಉಮ್ಮರ್ ಫಾರೂಕ್ ಫರಂಗಿಪೇಟೆ ಹಾಗೂ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಅವರು ಶ್ಲಾಘಿಸಿ ಅಭಿನಂದಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಫರಂಗಿಪೇಟೆ : ಮೌಲಾನಾ ಅಝಾದ್ ಪಬ್ಲಿಕ್ ಸ್ಕೂಲಿಗೆ 100 ಶೇಕಡಾ ಫಲಿತಾಂಶ : ಸ್ಪೀಕರ್ ಯು.ಟಿ. ಖಾದರ್ ಮುತುವರ್ಜಿಗೆ ವಿದ್ಯಾರ್ಥಿಗಳ ಸಾಧನೆಯ ಕೃತಜ್ಞತೆ Rating: 5 Reviewed By: karavali Times
Scroll to Top