ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನದ ವೇಳೆ ಅವಾಂತರ : 7 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ - Karavali Times ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನದ ವೇಳೆ ಅವಾಂತರ : 7 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ - Karavali Times

728x90

19 April 2026

ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನದ ವೇಳೆ ಅವಾಂತರ : 7 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ

ಪುತ್ತೂರು, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ಪುತ್ತೂರು ಜಾತ್ರೆಯಲ್ಲಿ ಏರ್ಪಡಿಸಲಾಗಿದ್ದ ಸುಡು ಮದ್ದು ಪ್ರದರ್ಶನದ ವೇಳೆ ಅವಾಂತರ ನಡೆದು ಏಳು ಮಂದಿ ಗಾಯಗೊಂಡ ಘಟನೆ ಎಪ್ರಿಲ್ 18 ರಂದು ರಾತ್ರಿ ವೇಳೆ ಸಂಭವಿಸಿದೆ. 

ಗಾಯಗೊಂಡವರನ್ನು ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ ಸುಮಂತ್ ಶೆಟ್ಟಿ (20), ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ ಹಾಗೂ ಮೋಹನ್ ಎಂದು ಹೆಸರಿಸಲಾಗಿದೆ. ಈ ಬಗ್ಗೆ ಸುಮಂತ್ ಶೆಟ್ಟಿ ಅವರು ಪೊಲೀಸರಿಗೆ ದೂರು ನೀಡಿದ್ದು, ಎಪ್ರಿಲ್ 18 ರಂದು ರಾತ್ರಿ ಪುತ್ತೂರಿನಲ್ಲಿ ನಡೆಯುತ್ತಿದ್ದ ಜಾತ್ರೆಗೆ ಸ್ನೇಹಿತರೊಂದಿಗೆ ಬಂದಿದ್ದು, ಜಾತ್ರೆಯ ಗದ್ದೆಯಲ್ಲಿ ಏರ್ಪಡಿಸಿದ್ದ ಸುಡುಮದ್ದು ಪ್ರದರ್ಶನವನ್ನು ದೂರದಲ್ಲಿ ನಿಂತು ಸ್ನೇಹಿತರೊಂದಿಗೆ ವೀಕ್ಷಿಸುತ್ತಿರುವಾಗ, ಸುಡುಮದ್ದಿನ ಬೆಂಕಿ ನಮ್ಮ ಮೇಲೆ ಬಿದ್ದಿರುತ್ತದೆ. ಗಾಯಗೊಂಡವರನ್ನು ಸ್ನೇಹಿತರು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಸುಡುಮದ್ದು ನಿರ್ವಹಣೆ ಮಾಡುವವರು ಹಾಗೂ ದೇವಸ್ಥಾನ ವ್ಯವಸ್ಥಾನ ಸಮಿತಿಯವರು ಮತ್ತು ಇತರರು ಸುಡುಮದ್ದು ಪ್ರದರ್ಶನದ ವೇಳೆ  ಅಗತ್ಯ ಮುಂಜಾಗ್ರತೆ ವ್ಯವಸ್ಥೆಯನ್ನು ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿರುವುದಾಗಿ ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಜಾತ್ರೆಯ ಸುಡುಮದ್ದು ಪ್ರದರ್ಶನದ ವೇಳೆ ಅವಾಂತರ : 7 ಮಂದಿ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಗೆ Rating: 5 Reviewed By: karavali Times
Scroll to Top