ಅಕ್ರಮ ಪ್ರವೇಶಗೈದು ಹಳೆ ಕಟ್ಟಡ ಕಡೆವಿದ ಪುತ್ತೂರು ದೇವಸ್ಥಾನದ ಪದಾಧಿಕಾರಿಗಳ ವಿರುದ್ದ ಪೊಲೀಸ್ ದೂರು - Karavali Times ಅಕ್ರಮ ಪ್ರವೇಶಗೈದು ಹಳೆ ಕಟ್ಟಡ ಕಡೆವಿದ ಪುತ್ತೂರು ದೇವಸ್ಥಾನದ ಪದಾಧಿಕಾರಿಗಳ ವಿರುದ್ದ ಪೊಲೀಸ್ ದೂರು - Karavali Times

728x90

19 April 2026

ಅಕ್ರಮ ಪ್ರವೇಶಗೈದು ಹಳೆ ಕಟ್ಟಡ ಕಡೆವಿದ ಪುತ್ತೂರು ದೇವಸ್ಥಾನದ ಪದಾಧಿಕಾರಿಗಳ ವಿರುದ್ದ ಪೊಲೀಸ್ ದೂರು

ಪುತ್ತೂರು, ಎಪ್ರಿಲ್ 19, 2026 (ಕರಾವಳಿ ಟೈಮ್ಸ್) : ಇಲ್ಲಿನ ಮುಖ್ಯ ರಸ್ತೆಯ ಬದಿಯಲ್ಲಿರುವ ಹಳೆಯ ಕಟ್ಟಡ ಮತ್ತು ಜಮೀನಿಗೆ ಅಕ್ರಮ ಪ್ರವೇಶಿಸಿ ಕಟ್ಟಡ ಕೆಡವಿದ ಬಗ್ಗೆ ದೇವಸ್ಥಾನದ ಪದಾಧಿಕಾರಿಗಳ ವಿರುದ್ದ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಬಗ್ಗೆ ಮಂಗಳೂರು ಕದ್ರಿಹಿಲ್ಸ್ ನಿವಾಸಿ ಡಾ ಅರವಿಂದ ರಾವ್ ಕೇದಿಗೆ ಅವರು ಪೊಲೀಸರಿಗೆ ದೂರು ನೀಡಿದ್ದು, ಬಂಟ್ವಲ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಅದೇಶದ ಮೇರೆಗೆ ಇವರ ಸುಪರ್ಧಿಯಲ್ಲಿದ್ದ ಪುತ್ತೂರು ಮುಖ್ಯ ರಸ್ತೆಯ  ಬದಿಯಲ್ಲಿರುವ ಹಳೆಯ ಕಟ್ಟಡ ಮತ್ತು ಜಮೀನಿಗೆ, ಪುತ್ತೂರಿನಲ್ಲಿರುವ  ದೇವಸ್ಥಾನದ ಪದಾಧಿಕಾರಿಗಳಾದ ಈಶ್ವರ ಭಟ್ ಪಂಜಿಗುಡ್ಡೆ ಮತ್ತು ಇತರರು ಎಪ್ರಿಲ್ 14 ರಂದು ರಾತ್ರಿ ಅಕ್ರಮವಾಗಿ ಪ್ರವೇಶಿಸಿ, ಸದ್ರಿ ಜಮೀನಿನಲ್ಲಿದ್ದ ಹಳೆಯ ಕಟ್ಟಡವನ್ನು ಕೆಡವಿರುತ್ತಾರೆ ಎಂಬುದಾಗಿ ಎಪ್ರಿಲ್ 17 ರಂದು ನೀಡಿದ ದೂರಿನಂತೆ  ಪುತ್ತೂರು ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಅಕ್ರಮ ಪ್ರವೇಶಗೈದು ಹಳೆ ಕಟ್ಟಡ ಕಡೆವಿದ ಪುತ್ತೂರು ದೇವಸ್ಥಾನದ ಪದಾಧಿಕಾರಿಗಳ ವಿರುದ್ದ ಪೊಲೀಸ್ ದೂರು Rating: 5 Reviewed By: karavali Times
Scroll to Top