ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಶೇಕಡಾ 98.40 ಫಲಿತಾಂಶ : ಬ್ಲಾಕುವಾರು ಫಲಿತಾಂಶದಲ್ಲಿ ಬಂಟ್ವಾಳಕ್ಕೆ ಕೊನೆ ಸ್ಥಾನ - Karavali Times ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಶೇಕಡಾ 98.40 ಫಲಿತಾಂಶ : ಬ್ಲಾಕುವಾರು ಫಲಿತಾಂಶದಲ್ಲಿ ಬಂಟ್ವಾಳಕ್ಕೆ ಕೊನೆ ಸ್ಥಾನ - Karavali Times

728x90

23 April 2026

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಶೇಕಡಾ 98.40 ಫಲಿತಾಂಶ : ಬ್ಲಾಕುವಾರು ಫಲಿತಾಂಶದಲ್ಲಿ ಬಂಟ್ವಾಳಕ್ಕೆ ಕೊನೆ ಸ್ಥಾನ

ಮಂಗಳೂರು, ಎಪ್ರಿಲ್ 23, 2026 (ಕರಾವಳಿ ಟೈಮ್ಸ್) : ಈ ಬಾರಿಯ ಎಸ್ಸೆಸ್ಸೆಲ್ಸಿ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆ ಒಟ್ಟಾರೆ 98.40 ಶೇಕಡಾ ಫಲಿತಾಂಶ ದಾಖಲಿಸಿದೆ. ಜಿಲ್ಲೆಯ ಬ್ಲಾಕ್ ವಾರು ಫಲಿತಾಂಶದಲ್ಲಿ ಬಂಟ್ವಾಳ ಬ್ಲಾಕ್ 97.87 ಶೇಕಡಾ ಫಲಿತಾಂಶದೊಂದಿಗೆ ಕೊನೆಯ ಸ್ಥಾನ ಪಡೆದುಕೊಂಡಿದೆ. ಬಂಟ್ವಾಳ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿ-ಸಿಬ್ಬಂದಿಗಳ ಇಚ್ಛಾಶಕ್ತಿಯ ಕೊರತೆಯೇ ಜಿಲ್ಲೆಯಲ್ಲಿ ತಾಲೂಕು ಕೊನೆಯ ಸ್ಥಾನ ಪಡೆದುಕೊಳ್ಳಲು ಕಾರಣ ಎಂದು ತಾಲೂಕಿನ ಜನ ಅಭಿಪ್ರಾಯಪಟ್ಟಿದ್ದಾರೆ. 

ಜಿಲ್ಲೆಯ ಇತರ ಬ್ಲಾಕ್ ಗಳಾದ ಬೆಳ್ತಂಗಡಿ ಶೇ 99.05, ಮಂಗಳೂರು ಉತ್ತರ ಹಾಗೂ ದಕ್ಷಿಣ ಕ್ರಮವಾಗಿ 98.20 ಹಾಗೂ 98.32, ಮೂಡಬಿದ್ರೆ 99.53, ಪುತ್ತೂರು 98.05 ಹಾಗೂ ಸುಳ್ಯ ಬ್ಲಾಕ್ 99.10 ಫಲಿತಾಂಶ ದಾಖಲಿಸಿದೆ. 

ಜಿಲ್ಲೆಯಲ್ಲಿ ಒಟ್ಟು 27,207 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ 26,771 ಮಂದಿ ಉತ್ತೀರ್ಣರಾಗಿದ್ದಾರೆ. 436 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಕಳೆದ ಬಾರಿ ಜಿಲ್ಲೆಯಲ್ಲಿ 2,341 ಮಂದಿ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಶೇಕಡಾ 98.40 ಫಲಿತಾಂಶ : ಬ್ಲಾಕುವಾರು ಫಲಿತಾಂಶದಲ್ಲಿ ಬಂಟ್ವಾಳಕ್ಕೆ ಕೊನೆ ಸ್ಥಾನ Rating: 5 Reviewed By: karavali Times
Scroll to Top