ಬಂಟ್ವಾಳ, ಎಪ್ರಿಲ್ 04, 2026 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಅಟೋ ಗ್ಯಾಸ್ ಪಂಪ್ ಗಳಲ್ಲಿ ಕೃತಕ ಅಭಾವ ಹಾಗೂ ವಿಪರೀತ ದರ ಏರಿಕೆ ಬಗ್ಗೆ ಅಟೋ ರಿಕ್ಷಾ ಚಾಲಕರ ದೂರಿನ ಹಿನ್ನಲೆಯಲ್ಲಿ ಶನಿವಾರ ತಾಲೂಕಿನ ಕೆಲವು ಆಟೋ ಗ್ಯಾಸ್ ಏಜೆನ್ಸಿಗಳಿಗೆ ತಾಲೂಕು ತಹಶೀಲ್ದಾರ್ ಜಿ ಮಂಜುನಾಥ್, ಬಂಟ್ವಾಳ ನಗರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿ-ಸಿಬ್ಬಂದಿಗಳು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭೇಟಿ ವೇಳೆ ಗ್ಯಾಸ್ ಪಂಪ್ ಗಳಲ್ಲಿರುವ ಸ್ಟಾಕ್ ಹಾಗೂ ದರಪಟ್ಟಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಪ್ರಮಾಣದ ದರ ವಸೂಲಿ ಮಾಡದಂತೆ ತಾಕೀತು ಮಾಡಿದ್ದಾರೆ.










0 comments:
Post a Comment