ನಡುಪದವು ಪಿ.ಎ. ಕಾಲೇಜಿನ ಪದವಿ-ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀದಿ ಕಾಳಗ ವೀಡಿಯೋ ವೈರಲ್ : ಕೊಣಾಜೆ ಪೊಲೀಸರಿಂದ ಕ್ರಮ - Karavali Times ನಡುಪದವು ಪಿ.ಎ. ಕಾಲೇಜಿನ ಪದವಿ-ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀದಿ ಕಾಳಗ ವೀಡಿಯೋ ವೈರಲ್ : ಕೊಣಾಜೆ ಪೊಲೀಸರಿಂದ ಕ್ರಮ - Karavali Times

728x90

4 April 2026

ನಡುಪದವು ಪಿ.ಎ. ಕಾಲೇಜಿನ ಪದವಿ-ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀದಿ ಕಾಳಗ ವೀಡಿಯೋ ವೈರಲ್ : ಕೊಣಾಜೆ ಪೊಲೀಸರಿಂದ ಕ್ರಮ

ಬಂಟ್ವಾಳ, ಎಪ್ರಿಲ್ 04, 2026 (ಕರಾವಳಿ ಟೈಮ್ಸ್) : ಕೈರಂಗಳ ಗ್ರಾಮದ ನಡುಪದವು ಪಿ ಎ ಕಾಲೇಜಿನ ಆವರಣದಲ್ಲಿ ಪದವಿ ಹಾಗೂ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಗಳಿಗೆ ಪರಸ್ಪರ ಹೊಡೆದಾಡಿಕೊಂಡಿರುವ ಬಗ್ಗೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಎಪ್ರಿಲ್ 1 ರಂದು ಮಧ್ಯಾಹ್ನ 1 ಗಂಟೆ ವೇಳೆಗೆ ಈ ಹೊಡೆದಾಟ ಕೃತ್ಯ ನಡೆದಿದೆ ಎನ್ನಲಾಗಿದೆ. ಕಾಲೇಜು ಸಮವಸ್ತ್ರ ಧರಿಸಿ ಕಾಲೇಜು ಆವರಣದಲ್ಲೇ ವಿದ್ಯಾರ್ಥಿಗಳು ಎರಡು ಗುಂಪುಗಳಾಗಿ ಪರಸ್ಪರ ಹೊಡೆದಾಟ ನಡೆಸಿಕೊಂಡಿರುವುದು ವೈರಲ್ ವೀಡಿಯೋದಲ್ಲಿ ಕಂಡು ಬಂದಿದೆ. ವಿದ್ಯಾರ್ಥಿಗಳ ಹೊಡೆದಾಟದ ವೀಡಿಯೋವನ್ನು ಯಾರೋ ಲೈವ್ ಆಗಿ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವೈರಲ್ ವೀಡಿಯೋದ ಬೆನ್ನು ಹತ್ತಿದ ಪೊಲೀಸರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಡೆದಾಟ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ನಗರದ ಕೆಲವೊಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರಸ್ಪರ ಗುಂಪು ಕಟ್ಟಿಕೊಂಡು ಕ್ಷುಲ್ಲಕ ವಿಚಾರಗಳಿಗೆ ದ್ವೇಷದ ಕಣ್ಣುಗಳಿಂದ ನೋಡಿಕೊಂಡು ಜಗಳ, ಹೊಡೆದಾಟ ನಡೆಸಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಬಹಳಷ್ಟು ನಡೆಯುತ್ತಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿ ಪೋಷಕರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಲಕ್ಷ ಲಕ್ಷ ಮೊತ್ತದ ಖರ್ಚು ಮಾಡಿ ಪೋಷಕರು ತಮ್ಮ ಮಕ್ಕಳನ್ನು ನಗರದ ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಕಳಿಸುತ್ತಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳು ಮಾತ್ರ ಕೆಲವೊಂದು ಕಾರಣಗಳಿಗಾಗಾಗಿ ತಮ್ಮದೇ ತರಗತಿಯ ಅಥವಾ ಇನ್ನೊಂದು ವಿಭಾಗದ ವಿದ್ಯಾರ್ಥಿಗಳನ್ನು ಪರಸ್ಪರ ಎದುರು ಹಾಕಿಕೊಂಡು ಹೊಡೆದಾಟದಂತಹ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು ಬುದ್ದಿವಂತರ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಇಂತಹ ವಿದ್ಯಾರ್ಥಿಗಳನ್ನು ಗುರುತಿಸಿ ಕಾಲೇಜು ಆಡಳಿತ ಮಂಡಳಿಗಳು ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಸಭ್ಯ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಾಂತ ಅಧ್ಯಯನಕ್ಕೆ ಪೂರಕ ವಾತಾವರಣ ನಿರ್ಮಿಸುವಂತೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿ ಪೋಷಕರು ಆಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ನಡುಪದವು ಪಿ.ಎ. ಕಾಲೇಜಿನ ಪದವಿ-ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬೀದಿ ಕಾಳಗ ವೀಡಿಯೋ ವೈರಲ್ : ಕೊಣಾಜೆ ಪೊಲೀಸರಿಂದ ಕ್ರಮ Rating: 5 Reviewed By: karavali Times
Scroll to Top