ಬಂಟ್ವಾಳ, ಎಪ್ರಿಲ್ 04, 2026 (ಕರಾವಳಿ ಟೈಮ್ಸ್) : ಪಿಡಬ್ಲ್ಯುಡಿ ಗುತ್ತಿಗೆದಾರರು ಕಟ್ಟಡ ನಿರ್ಮಾಣಕ್ಕಾಗಿ ದಾಸ್ತಾನಿಟ್ಟಿದ್ದ ಕಬ್ಬಿಣದ ಪಿಲ್ಲರ್ ಗಳನ್ನು ಕಳವುಗೈದ ಘಟನೆ ಇರಾ ಗ್ರಾಮದ ಆಚೆಬೈಲು ಎಂಬಲ್ಲಿ ಎಪ್ರಿಲ್ 3 ರಂದು ಬೆಳಕಿಗೆ ಬಂದಿದೆ.
ಈ ಬಗ್ಗೆ ಗುತ್ತಿಗೆದಾರರ ಬಳಿ ಬರಹಗಾರನಾಗಿ ಕೆಲಸ ಮಾಡುವ ಇರಾ ಗ್ರಾಮದ ಪರಪ್ಪು ನಿವಾಸಿ ಹನೀಫ್ (41) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಉಳ್ಳಾಲ ತಾಲೂಕು ಇರಾ ಗ್ರಾಮದ ಆಚೆಬೈಲು ಎಂಬಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಕಲ್ಲು, ಜಲ್ಲಿ, ಮರಳು ಹಾಗೂ ಕಬ್ಬಿಣದ ಸರಳುಗಳನ್ನು ಎ 2 ರಂದು ದಾಸ್ತಾನು ಮಾಡಲಾಗಿತ್ತು. ಎ 3 ರಂದು ಸ್ಥಳಕ್ಕೆ ಬೆಳಿಗ್ಗೆ ಹೋಗಿ ನೋಡಿದಾಗ, ಅಲ್ಲಿದ್ದ 10 ಕಬ್ಬಿಣದ ಪಿಲ್ಲರ್ ಗಳ ಪೈಕಿ 5 ಕಬ್ಬಿಣ ಪಿಲ್ಲರ್ ಗಳು ಕಾಣೆಯಾಗಿದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳ್ಳತನವಾದ 300 ಕೆಜಿ ಕಬ್ಬಿಣದ ಪಿಲ್ಲರ್ ಅಂದಾಜು ಮೌಲ್ಯ 18 ಸಾವಿರ ರೂಪಾಯಿ ಆಗಿದೆ ಎಂದು ನೀಡಿದ ದೂರಿನ ಮೇರೆಗೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











0 comments:
Post a Comment