ಚೇಳೂರು : ಚರ್ಚ್ ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿ ಬೇಲಿ ಕಿತ್ತೆಸೆದು 20 ಕಾಂಕ್ರಿಟ್ ಕಂಬ ಕಳವು - Karavali Times ಚೇಳೂರು : ಚರ್ಚ್ ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿ ಬೇಲಿ ಕಿತ್ತೆಸೆದು 20 ಕಾಂಕ್ರಿಟ್ ಕಂಬ ಕಳವು - Karavali Times

728x90

4 April 2026

ಚೇಳೂರು : ಚರ್ಚ್ ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿ ಬೇಲಿ ಕಿತ್ತೆಸೆದು 20 ಕಾಂಕ್ರಿಟ್ ಕಂಬ ಕಳವು

ಬಂಟ್ವಾಳ, ಎಪ್ರಿಲ್ 04, 2026 (ಕರಾವಳಿ ಟೈಮ್ಸ್) : ಜಮೀನಿಗೆ ಅಕ್ರಮ ಪ್ರವೇಶ ಮಾಡಿ ತಂತಿ ಮುಳ್ಳು ಬೇಲಿ ಕಿತ್ತಾಕಿ ತಂತಿ ಮುಳ್ಳು ಅಳವಡಿಸಿದ 20 ಕಾಂಕ್ರಿಟ್ ಕಂಬಗಳನ್ನು ಹಾಗೂ ತಂತಿ ಮುಳ್ಳನ್ನು ಕಳವುಗೈದ ಘಟನೆ ಚೇಳೂರು ಗ್ರಾಮದಲ್ಲಿ ಎಪ್ರಿಲ್ 3 ರಂದು ಸಂಭವಿಸಿದೆ. 

ಈ ಬಗ್ಗೆ ಬೊಳ್ಳಾರು ನಿವಾಸಿ ರೋಬರ್ಟ್ ಡಿಸೋಜ (40) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಎಪ್ರಿಲ್ 3 ರಂದು ಬೆಳಗಿನ ಜಾವ ಉಳ್ಳಾಲ ತಾಲೂಕು ಚೇಳೂರು ಗ್ರಾಮದ ಕೆದೂರು ಚರ್ಚಿಗೆ ಸಂಬಂಧಪಟ್ಟ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಜೋನ್ ಸ್ಟೀಫನ್ ಡಿಸೋಜ, ಡೈಯಾನಾ ಜೆಸ್ಟಿನ್ ಡಿಸೋಜ, ಡೆರಿಕ್ ಪ್ರಕಾಶ್ ಡಿ ಸೋಜಾ, ಪ್ರಶಾಂತ್ ಡಿಸೋಜ ಹಾಗೂ ವಿನಿಲ್ ಎಂಬವರು ಜಮೀನಿಗೆ ಅಳವಡಿಸಿದ ಕಬ್ಬಿಣದ ಗೇಟ್ ಹಾಗೂ ತಂತಿ ಮುಳ್ಳು ಬೇಲಿಯನ್ನು ಕಬ್ಬಿಣದ ಗೇಟನ್ನು ಕಿತ್ತು ಶಾಲಾ ಬಳಿ ಬಿಸಾಕಿದ್ದಲ್ಲದೆ ತಂತಿ ಮುಳ್ಳು ಅಳವಡಿಸಿದ 20 ಕಾಂಕ್ರೀಟ್ ಕಂಬಗಳನ್ನು ಹಾಗೂ ತಂತಿ ಮುಳ್ಳನ್ನು ಕದ್ದುಕೊಂಡು ಹೋಗಿರುತ್ತಾರೆ. ಕಳವುಗೈದ 20 ಕಾಂಕ್ರೀಟ್ ಕಂಬ ಹಾಗೂ ತಂತಿ ಮುಳ್ಳಿನ ಮೌಲ್ಯ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ ಎಂದು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಚೇಳೂರು : ಚರ್ಚ್ ಜಮೀನಿಗೆ ಅಕ್ರಮ ಪ್ರವೇಶಗೈದು ತಂತಿ ಬೇಲಿ ಕಿತ್ತೆಸೆದು 20 ಕಾಂಕ್ರಿಟ್ ಕಂಬ ಕಳವು Rating: 5 Reviewed By: karavali Times
Scroll to Top