ಕೊಳಕೆ : ವಿಪರೀತ ಜ್ವರ ಬಾಧಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು - Karavali Times ಕೊಳಕೆ : ವಿಪರೀತ ಜ್ವರ ಬಾಧಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು - Karavali Times

728x90

16 April 2026

ಕೊಳಕೆ : ವಿಪರೀತ ಜ್ವರ ಬಾಧಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು

ಬಂಟ್ವಾಳ, ಎಪ್ರಿಲ್ 16, 2026 (ಕರಾವಳಿ ಟೈಮ್ಸ್) : ವಿಪರೀತ ಜ್ವರ ಬಾಧಿಸಿದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಜಿಪಮೂಡ ಗ್ರಾಮದ ಕೊಳಕೆ ಎಂಬಲ್ಲಿ ಎಪ್ರಿಲ್ 15 ರಂದು ಸಂಭವಿಸಿದೆ. 

ಮೃತರನ್ನು ಇಲ್ಲಿನ ನಿವಾಸಿ ರಾಜೇಶ್ ಬೆಳ್ಚಡ (50) ಎಂದು ಹೆಸರಿಸಲಾಗಿದೆ. ಇವರು ಮೆಲ್ಕಾರಿನ ಕಿರಣ್ ಬಾರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದು, ಇವರಿಗೆ 4 ದಿನಗಳಿಂದ ವಿಪರೀತ ಜ್ವರ ಬಂದ ಕಾರಣ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದು ಸರಕಾರಿ ಆಸ್ಪತ್ರೆಯಿಂದ ಔಷಧಿ ತಗೊಂದು ಬಂದು ಸೇವಿಸಿದ್ದರು. ಆದರೂ ಗುಣವಾಗದ ಕಾರಣ ಎ 14 ರಂದು ಇವರನ್ನು ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಿದಾಗ ವೈದ್ಯರು ತಕ್ಷಣ ಮಂಗಳೂರಿಗೆ ಸಾಗಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದರು. ಅಲ್ಲಿನ ವೈದ್ಯರು ನೀಡಿದ ಔಷಧಿ ಸೇವಿಸಿಯೂ ಗುಣವಾಗದ ಹಿನ್ನಲೆಯಲ್ಲಿ ಎ 15 ರಂದು ಬೆಳಿಗ್ಗೆ 4 ಗಂಟೆಗೆ ಮತ್ತೆ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ಅವರು ಬೆಳಿಗ್ಗೆ 6.18ರ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಮೃತರ ಪುತ್ರಿ ಕುಮಾರ್ ರಚನಾ ಆರ್ (26) ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಕೊಳಕೆ : ವಿಪರೀತ ಜ್ವರ ಬಾಧಿಸಿದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು Rating: 5 Reviewed By: karavali Times
Scroll to Top