ಬಂಟ್ವಾಳ, ಎಪ್ರಿಲ್ 06, 2026 (ಕರಾವಳಿ ಟೈಮ್ಸ್) : ಒಂಟಿಯಾಗಿ ವಾಸವಾಗಿದ್ದ ವ್ಯಕ್ತಿಯೋರ್ವರು ಮನೆಯ ಮಾಡಿನಲ್ಲಿ ನೇಣು ಹಾಕಿದ್ದುಮ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಮ್ಟಾಡಿ ಗ್ರಾಮದ ಬೆದ್ರಗುಡ್ಡೆ ಎಂಬಲ್ಲಿ ಎಪ್ರಿಲ್ 5 ರಂದು ಬೆಳಕಿಗೆ ಬಂದಿದೆ.
ಮೃತರನ್ನು ಇಲ್ಲಿನ ನಿವಾಸಿ ಗ್ರೆಗರಿ ಪೆಡ್ರಿಕ್ ಮೊಂತೆರೋ (55) ಎಂದು ಹೆಸರಿಸಲಾಗಿದೆ. ಇವರ ಹೆಂಡತಿ ಪ್ರೆಸಿಲ್ಲಾ ಮೊಂತೆರೋ ಹಾಗೂ ಮಗ ಡೆರಿಕ್ ಮೊಂತೆರೋ ಸುಮಾರು 25 ವರ್ಷಗಳ ಹಿಂದೆ ಕೌಟುಂಬಿಕ ಸಮಸ್ಯೆಯಿಂದ ಮುಂಬೈನ ಅಮರನಾಥ ಎಂಬಲ್ಲಿ ವಾಸವಾಗಿರುತ್ತಾರೆ. ಹೆಂಡತಿ ಹಾಗೂ ಮಗ ಬಿಟ್ಟು ಹೋದ ನಂತರ ಒಂಟಿಯಾಗಿರುವ ಗ್ರೆಗರಿ ಪೆಡ್ರಿಕ್ ಮೊಂತೆರೋ ಅವರು ಬೆದ್ರಗುಡ್ಡೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಮಾತ್ರವಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಿ ಮದ್ಯ ಸೇವಿಸುವ ಚಟವನ್ನೂ ಬೆಳೆಸಿಕೊಂಡಿದ್ದರು.
ಎಪ್ರಿಲ್ 5 ರಂದು ಇವರ ಸಹೋದರನ ಪುತ್ರಿ ವಿಯೋನಾ ಮೊಂತೆರೋ ಈಸ್ಟರ್ ಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಗ್ರೆಗರಿ ಮೊಂತೆರೋ ಅವರ ಮನೆಗೆ ಹೋದ ವೇಳೆ ಅವರು ಮನೆಯ ಅಂಗಳಕ್ಕೆ ಹಾಕಿದ ಮಾಡಿನ ಕಬ್ಬಿಣದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವ ಕಂಡು ಬಂದಿದ್ದು, ವಿಷಯವನ್ನು ಆಕೆ ತನ್ನ ತಂದೆ ವಿಲಿಯಂ ವಿಕ್ಟರ್ ಮೊಂತೆರೋ ಅವರಿಗೆ ತಿಳಿಸಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ತೆರಳಿದ ವಿಲಿಯಂ ವಿಕ್ಟರ್ ಮೊಂತೆರೋ ಅವರಿಗೆ ಅಣ್ಣ ಗ್ರೆಗರಿ ಪೆಡ್ರಿಕ್ ಮೊಂತೆರೋ ಮನೆಯ ಮಾಡಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಅಲ್ಲದೆ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ವಿಲಿಯಮ್ ವಿಕ್ಟರ್ ಮೋಂತೆರೋ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೆÇೀಲಿಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.











0 comments:
Post a Comment